ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್ | ರೇಷ್ಮೆ ಮಾರುಕಟ್ಟೆ ಅವ್ಯವಸ್ಥೆ: ಶಾಸಕರಿಗೆ ದೂರು

Published 22 ಜೂನ್ 2024, 4:58 IST
Last Updated 22 ಜೂನ್ 2024, 4:58 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಸಂತೆಮಾವತ್ತೂರು ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಜತೆಗೆ ದಲ್ಲಾಳಿಗಳ ಕಾಟ ಹೆಚ್ಚಾಗಿದ್ದು ಗಮನ ಹರಿಸುವಂತೆ ರೇಷ್ಮೆ ಬೆಳೆಗಾರರು ಶಾಸಕ ಡಾ.ರಂಗನಾಥ್ ಅವರಿಗೆ ಮನವಿ ಸಲ್ಲಿಸಿದರು.

ಗುರುವಾರ ಸಂತೇಪೇಟೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ರೈತರು ಮತ್ತು ರೀಲರ್ ವೆಂಕಟಪ್ಪ, ಸ್ವಾಮಿ ಶಾಸಕರಿಗೆ ಮನವಿ ಸಲ್ಲಿಸಿದರು.

ಸಂತೆಮಾವತ್ತೂರು ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ, ಅಧಿಕಾರಗಳು ಎರಡು ವರ್ಷಗಳ ಹಿಂದೆ ನಿವೃತ್ತನಾದ ನೌಕರರನ್ನು ಮತ್ತೆ ಕೆಲಸಕ್ಕೆ ಅನಧಿಕೃತವಾಗಿ ನಿಯೋಜಿಸಿಕೊಂಡು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಪ್ರತಿಯೊಂದು ವ್ಯವಹಾರದಲ್ಲಿ ಅಧಿಕಾರಿಗಳು ಅನಧಿಕೃತವಾಗಿ ಪಾಲು ಪಡೆದುಕೊಳ್ಳುತ್ತಿದ್ದಾರೆ‌. ರೈತರನ್ನು ವಂಚಿಸುತ್ತಿದ್ದಾರೆ ಕೂಡಲೇ ಗಮನ ಹರಿಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

ಸ್ಥಳದಲ್ಲಿದ್ದ ರೇಷ್ಮೆ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು, ಅನಧಿಕೃತವಾಗಿ ನಿಯೋಜನೆ ಮಾಡಿಕೊಂಡಿರುವ ನಿವೃತ್ತ ನೌಕರನನ್ನು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸದಂತೆ ಸೂಚನೆ ನೀಡಿದರು.

ನಿಯಮ ಮತ್ತು ಸೂಚನೆ ಮೀರಿ ನಿವೃತ್ತ ನೌಕರ ಕಾರ್ಯನಿರ್ವಹಿಸಿದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT