ಮಂಗಳವಾರ, ಮಾರ್ಚ್ 9, 2021
31 °C

ಶಿರಾ ಬಳಿ ರಸ್ತೆ ಅಪಘಾತ: ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ (ತುಮಕೂರು ಜಿ):  ರಾಷ್ಟ್ರೀಯ ಹೆದ್ದಾರಿ 48 ರ ಗಾಂಧಿನಗರ ಸಮೀಪ‌ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ.

ಶಿರಾ ಕಡೆಯಿಂದ ತಮಿಳುನಾಡಿಗೆ ಕ್ಯಾಂಟರ್ ನಲ್ಲಿ ಭತ್ತ ಕಟಾವು ಮಾಡಯವ ಯಂತ್ರವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಕ್ಯಾಂಟರ್ ಹಿಂಬದಿ ಚಕ್ರ ಪಂಚರ್ ಆಗಿದೆ. ಚಕ್ರ ಬದಲಿಸಲು ಚಾಲಕ ಮುಂದಾಗಿದ್ದಾರೆ. ಈ ವೇಳೆ ಬಳ್ಳಾರಿಯಿಂದ ಬೆಂಗಳೂರಿಗೆ  ಮೊಟ್ಟೆ ತುಂಬಿಕೊಂಡು ಸಾಗುತ್ತಿದ್ದ ಲಾರಿ ಕ್ಯಾಂಟರ್ ಗೆ ಡಿಕ್ಕಿಯಾಗಿದೆ.

ಕ್ಯಾಂಟರ್ ಲಾರಿಯಲ್ಲಿದ್ದ ಭತ್ತ ಕಟಾವು ಮಾಡುವ ಯಂತ್ರದ ಆಪರೇಟರ್  ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಹೊಳೆಅನ್ನೇರಿ ಗ್ರಾಮದ ನಿಂಗರಾಜು (22)  ಹಾಗೂ ದಾವಣಗೆರೆ ತಾಲ್ಲೂಕಿನ ಸ್ಯಾಗಳಿ ಗ್ರಾಮದ ಶ್ರೀನಿವಾಸ್ (22) ಮತ್ತು ಲಾರಿ ಚಾಲಕ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮಹೇಶ್ (25)  ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಕಳ್ಳಂಬೆಳ್ಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮೊಳಕಾಲ್ಮುರು ಸಮೀಪ ಬಸ್ - ಕ್ರೂಸರ್ ಡಿಕ್ಕಿ: ಐವರ ಸಾವು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು