ಸೋಮವಾರ, ಸೆಪ್ಟೆಂಬರ್ 21, 2020
21 °C
ನಾಲ್ಕು ಮಂದಿ ಮಾಧ್ಯಮದವರಿಗೂ ಸೋಂಕು

ತುಮಕೂರು: ಮತ್ತೆ 69 ಮಂದಿಗೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಗುರುವಾರ ಮತ್ತೆ 69 ಮಂದಿಗೆ ಸೋಂಕು ತಗುಲಿದೆ. ಅಲ್ಲದೆ ಮತ್ತೆ ಇಬ್ಬರು ಮೃತಪಟ್ಟಿದ್ದು, ಈ ಸಂಖ್ಯೆ 97ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಸಂಖ್ಯೆ 2278ಕ್ಕೆ ಮುಟ್ಟಿದೆ.

ಕುಣಿಗಲ್ ತಾಲ್ಲೂಕಿನ ಹೊಸಪಾಳ್ಯದ 67 ವರ್ಷದ ವ್ಯಕ್ತಿ ಹಾಗೂ ತುಮಕೂರಿನ ಸಂತೆಪೇಟೆಯ 65 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ತುಮಕೂರು ಹೊರತುಪಡಿಸಿ ಕುಣಿಗಲ್‌ನಲ್ಲಿ ಸೋಂಕಿನ ಪ್ರಕರಣಗಳು ಅಧಿಕವಾಗಿವೆ. ಕೊರೊನಾ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದ 65 ಮಂದಿ ಗುಣಮುಖರಾಗಿದ್ದು ಗುರುವಾರ ಬಿಡುಗಡೆಯಾದರು. ಇಲ್ಲಿಯವರೆಗೆ 1,265 ಮಂದಿ ಗುಣಮುಖರಾಗಿದ್ದಾರೆ. 946 ಸಕ್ರಿಯ ಪ್ರಕರಣಗಳು ಇವೆ. 4,562 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ.

ಪತ್ರಕರ್ತರಿಗೆ ಸೋಂಕು: ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಪತ್ರಕರ್ತರು ಹಾಗೂ ಒಬ್ಬ ಕ್ಯಾಮೆರಾಮೆನ್‌ಗೂ ಸೋಂಕು ತಗುಲಿರುವುದು ಗುರುವಾರ ಪತ್ತೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು