ತುಮಕೂರು: ರಾಜ್ಯ ಸಾಫ್ಟ್ಬಾಲ್ ಕ್ರಿಕೆಟ್ ಅಸೋಸಿಯೇಷನ್ನಿಂದ ನ. 1ರಿಂದ ಡಿ. 1ರ ವರೆಗೆ ಬೆಂಗಳೂರಿನಲ್ಲಿ ಐಪಿಎಲ್ ಮಾದರಿಯಲ್ಲಿ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ (ಕೆಎಸ್ಪಿಎಲ್) ಆಯೋಜಿಸಲಾಗಿದೆ.

‘ಗಲ್ಲಿ ಕ್ರಿಕೆಟ್ನಿಂದ ಅಂತರರಾಷ್ಟ್ರೀಯ ಕ್ರಿಕೆಟ್ನ ಕನಸು ಕಾಣುವ ಯುವ ಜನರಿಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಟೂರ್ನಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ 31 ಜಿಲ್ಲೆಯ ಆಟಗಾರರನ್ನು ಗುರುತಿಸಲಾಗಿದೆ. ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಫ್ಟ್ಬಾಲ್ ಕ್ರಿಕೆಟ್ ಟೂರ್ನಿ ಏರ್ಪಡಿಸುವುದು ನಮ್ಮ ಉದ್ದೇಶ’ ಎಂದು ಅಸೋಸಿಯೇಷನ್ ಅಧ್ಯಕ್ಷ ಗಂಗಾಧರರಾಜು ಇಲ್ಲಿ ಸೋಮವಾರ ಹೇಳಿದರು.

ಬೆಂಗಳೂರಿನ ಸೂಲದೇವನಹಳ್ಳಿಯಲ್ಲಿರುವ ಆಚಾರ್ಯ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. 32 ತಂಡಗಳು ಭಾಗವಹಿಸಲಿವೆ. ಮೊದಲ ಬಹುಮಾನವಾಗಿ ₹50 ಲಕ್ಷ, ದ್ವಿತೀಯ ₹25 ಲಕ್ಷ ನೀಡಲಾಗುತ್ತದೆ. ತುಮಕೂರು ಟೈಟಾನ್ ತಂಡದಲ್ಲಿ ಸ್ಥಳೀಯ ಆಟಗಾರರ ಜತೆಗೆ ರಾಜ್ಯಮಟ್ಟದ ನಾಲ್ವರು ಆಟಗಾರರಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತುಮಕೂರು ಟೈಟಾನ್ ತಂಡದ ಮಾಲೀಕ ರಘು, ಆಟಗಾರರಾದ ನಿತಿನ್, ಪವನ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.