ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸಮಾನತೆ ಕನಸು ಕಂಡಿದ್ದ ಅಂಬೇಡ್ಕರ್‌ –ಆರ್.ಮಹೇಶ್‌

ಅಂಬೇಡ್ಕರ್‌, ಸಂವಿಧಾನ ಕುರಿತು ವಿಶೇಷ ಉಪನ್ಯಾಸ
Published 18 ಆಗಸ್ಟ್ 2023, 14:43 IST
Last Updated 18 ಆಗಸ್ಟ್ 2023, 14:43 IST
ಅಕ್ಷರ ಗಾತ್ರ

ತುಮಕೂರು: ಅಂಬೇಡ್ಕರ್‌ ಬರಹ ಮತ್ತು ಭಾಷಣಗಳು ಸಮಾನತೆ ಸಾರುವವರಿಗೆ ಬೆಳಕಾಗಿ, ಅಸಮಾನತೆಯ ಕಿಡಿ ಹಚ್ಚುವ ಮೂಢರಿಗೆ ಬೆಂಕಿಯಾಗಿವೆ ಎಂದು ಬೆಂಗಳೂರು ಕ್ರೈಸ್ಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆಯುಷ್ಮಾನ್ ಆರ್.ಮಹೇಶ್‌ ಹೇಳಿದರು.

ವಿ.ವಿಯಲ್ಲಿ ಶುಕ್ರವಾರ ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ ಬಿ.ಆರ್.ಅಂಬೇಡ್ಕರ್‌ ಸಮಗ್ರ ಭಾಷಣ ಮತ್ತು ಬರಹಗಳು ಹಾಗೂ ಸಂವಿಧಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಗರಿಕತೆ ಹೆಚ್ಚಾದಂತೆ ಅಸಮಾನತೆ, ಜಾತಿ ವ್ಯವಸ್ಥೆಯ ಬೇಲಿ ದಾಟಬೇಕಾದ ನಾವೆಲ್ಲರೂ, ಮತ್ತದೇ ಮೂಢತೆಯ ಕತ್ತಲಿನ ಕಡೆಗೆ ಹೋಗುತ್ತಿದ್ದೇವೆ. ಜಾತಿ, ಮತ, ಪಂಗಡಗಳಿಂದ ಮುಕ್ತವಾದ ಭವ್ಯ ಭಾರತವನ್ನು ನೋಡುವುದು ಅಂಬೇಡ್ಕರ್‌ ಕನಸಾಗಿತ್ತು. ಅದಕ್ಕಾಗಿ ಅವರು ಶ್ರಮಿಸಿದ್ದರು ಎಂದರು.

ಬಿ.ಆರ್.ಅಂಬೇಡ್ಕರ್‌ ಅಧ್ಯಯನ ಕೇಂದ್ರದ ಸಂಯೋಜಕ ಚಿಕ್ಕಣ್ಣ, ‘ನಾವೆಲ್ಲರೂ ಅಂಬೇಡ್ಕರ್ ಅವರನ್ನು ಒಂದು ಜಾತಿ, ಮತ, ಸಮುದಾಯಕ್ಕೆ ಸೇರಿಸಿದರೆ, ನಮ್ಮ ಮನಸು ಸಂಕುಚಿತವಾದದ್ದು ಎಂದೇ ಹೇಳಬಹುದು’ ಎಂದು ಅಭಿಪ್ರಾಯಪಟ್ಟರು.

ವಿ.ವಿ ಕುಲಸಚಿವೆ ನಾಹಿದಾ ಜಮ್ ಜಮ್‌, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಸಂಯೋಜಕ ಕೆ.ಮಹಾಲಿಂಗ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT