ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಹುಣಸೆ ವಹಿವಾಟು ಶುರು: ಇಳುವರಿ ಕುಸಿತ, ದರದಲ್ಲಿ ಏರಿಳಿತ

Published 29 ಫೆಬ್ರುವರಿ 2024, 12:31 IST
Last Updated 29 ಫೆಬ್ರುವರಿ 2024, 12:31 IST
ಅಕ್ಷರ ಗಾತ್ರ

ರಾಜ್ಯದಲ್ಲಿಯೇ ದೊಡ್ಡ ಹುಣಸೆ ಮಾರುಕಟ್ಟೆಯಾದ ತುಮಕೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಸಕ್ತ ಋತುವಿನ ಹುಣಸೆ ವಹಿವಾಟು ಶುರುವಾಗಿದ್ದು, ಗುಣಮಟ್ಟದ ಹುಣಸೆಗೆ ಉತ್ತಮ ದರ ಸಿಗುತ್ತಿದೆ. ಹುಣಸೆ ಬೆಳೆಗಾರರು ಉತ್ಸಾಹದಿಂದಲೇ ಮಾರುಕಟ್ಟೆಯತ್ತ ಬರುತ್ತಿದ್ದಾರೆ. ಕಳೆದ ವರ್ಷ ಮಳೆ ಕೊರತೆಯಿಂದ ಈ ಬಾರಿ ಇಳುವರಿ ಕುಸಿತವಾಗಿದ್ದು, ಹುಣಸೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ.ಅಲ್ಲದೆ, ಮರದಿಂದ ಹಣ್ಣು ಕಿತ್ತು ಸಿಪ್ಪೆ, ಬೀಜ, ನಾರು ಬೇರ್ಪಡಿಸಿ ಮಾರುಕಟ್ಟೆಗೆ ತರಬೇಕು. ಮರ ಹತ್ತಿ ಕಾಯಿ ಬಿಡಿಸಲು ಜನ ಸಿಗುತ್ತಿಲ್ಲ ಎಂಬ ಅಳಲು ಹುಣಸೆ ಬೆಳೆಗಾರರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT