ಸೋಮವಾರ, ನವೆಂಬರ್ 30, 2020
24 °C

ದರೋಡೆ: 10 ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‌ಇಲ್ಲಿನ ವಾಲ್ಮೀಕಿನಗರದ 6ನೇ ಕ್ರಾಸ್‌ನ ವಿಶ್ವೇಶ್ವರ ಆರಾಧ್ಯ ಅವರ ಮನೆಗೆ ನುಗ್ಗಿ ಬೆದರಿಕೆ ಹಾಕಿ ₹ 5.87 ಲಕ್ಷ ಮೌಲ್ಯದ 4 ಚಿನ್ನದ ಬಳೆಗಳು, ₹ 72 ಸಾವಿರ ನಗದು ಮತ್ತು ಎರಡು ಮೊಬೈಲ್ ದೋಚಿದ ಆರೋಪದ ಮೇಲೆ 10 ಮಂದಿಯನ್ನು ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ರೋಹಿತ, ಮನೋಜ್ ಕುಮಾರ್, ಕೆ.ಆರ್. ರಾಘವೇಂದ್ರ, ವೆಂಕಟೇಶ, ಕೆ. ಭರತ್ ಕುಮಾರ್, ಕೆ.ಎಂ. ಗಂಗಾಧರ, ಜಿ.ಎಚ್. ಪವನ್, ಟಿ.ಜಿ. ಸಂತೋಷ್, ಪವನ್ ಕುಮಾರ್, ಹೆಬ್ಬೂರು ಹೋಬಳಿ ಚನ್ನಿಗಪ್ಪನಪಾಳ್ಯದ ಲೋಕೇಶ್ ಬಂಧಿತರು.

ಆರೋಪಿಗಳ ಪತ್ತೆಗೆ ‌ತಿಲಕ್‌‌ಪಾರ್ಕ್‌ ಸಿಪಿಐ ಮುನಿರಾಜು ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ರೌಡಿ ರೋಹಿತನ ಜತೆ ಸೇರಿ ಕೃತ್ಯ ಎಸಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಒಂದು ಆಟೊ, ಎರಡು ದ್ವಿಚಕ್ರವಾಹನ, ₹ 20 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

ತುಮಕೂರು ನಗರ ಸಿಪಿಐ ನವೀನ್, ಎಎಸ್‌ಐ ಪರಮೇಶ್, ಸಿಬ್ಬಂದಿ ಸೈಮನ್ ವಿಕ್ಟರ್, ಮುನಾವರ್ ಪಾಷ, ಹನುಮರಂಗಯ್ಯ, ಲೋಕೇಶ್, ರೇಣುಕಾ ಪ್ರಸನ್ನ, ವಿಠಲ್ ವಾಳಿಖಿಂಡಿ, ನವೀನ್, ರಮೇಶ್, ಜಗದೀಶ್ ಕಾರ್ಯಾಚರಣೆ ತಂಡದಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.