ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಗಲವಾಡಿ: ಕುಡಿಯುವ ನೀರಿಗೆ ಜನರ ಪರದಾಟ

Last Updated 5 ಜೂನ್ 2021, 6:10 IST
ಅಕ್ಷರ ಗಾತ್ರ

ಹಾಗಲವಾಡಿ: ಹೋಬಳಿಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬೀಳು ಗ್ರಾಮದಲ್ಲಿ ಐದು ವರ್ಷಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಈವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

25 ಮನೆಗಳು ಇರುವ ದೊಡ್ಡಬೀಳು ಗ್ರಾಮದಲ್ಲಿನ ನೀರಿನ ಸಮಸ್ಯೆ ಕುರಿತು ಶಿವಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಗ್ರಾಮದಲ್ಲಿ ಸಿಸ್ಟನ್ ನಿರ್ಮಾಣ ಮಾಡಿ ಐದು ವರ್ಷ ಆಗಿದೆ. ಈವರೆಗೂ ಪೈಪ್‌ಲೈನ್ ಮಾಡದೇ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ.

ಗ್ರಾಮಕ್ಕೆ ಕುಡಿಯಲು ನೀರಿಲ್ಲ, ಗ್ರಾಮದಲ್ಲಿ ಒಂದು ಕೈಪಂಪು ಇದ್ದು ಇದರಲ್ಲಿ ಗಂಟೆಗೆ ಐದಾರು ಬಿಂದಿಗೆ ನೀರು ಬರುತ್ತದೆ. ಮತ್ತೆ ನೀರಿಗಾಗಿ ಒಂದು ಗಂಟೆ ಕಾಯಬೇಕು. ಅಧಿಕಾರಿಗಳು ಶೀಘ್ರ ಸ್ಪಂದಿಸದಿದ್ದರೆ, ಶಿವಪುರ ಗ್ರಾಮ ಪಂಚಾಯಿತಿ
ಮುಂದೆ ಧರಣಿ ನಡೆಸಲಾಗುವುದು ಎಂದು ಎಂದು ಗ್ರಾಮಸ್ಥ ರಾಜಣ್ಣ ಎಚ್ಚರಿಸಿದ್ದಾರೆ.

ಶಿವಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಪ್ರತಿಕ್ರಿಯಿಸಿ, ದೊಡ್ಡಬೀಳು ಗ್ರಾಮದ ನೀರಿನ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ರೂಪಿಸಲು ಯೋಜಿಸಲಾಗಿದೆ. ಅಲ್ಲಿಯವರಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತೇವೆ ಎಂದರು.

ಗ್ರಾಮಸ್ಥರಾದ ಗಿರಿಜಮ್ಮ, ಸಿದ್ದಜ್ಜಿ, ರಾಜಮ್ಮ, ಕಲ್ಪನಾ, ರಾಜಪ್ಪ, ಸಿದ್ದರಾಮಕ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT