ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಗುಲದ ಹುಂಡಿ ಒಡೆದು ಕಳ್ಳತನ

Published 9 ಜುಲೈ 2024, 5:45 IST
Last Updated 9 ಜುಲೈ 2024, 5:45 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಕೆ.ಪಾಲಸಂದ್ರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಕಳ್ಳರು ದೇಗುಲದ ಹುಂಡಿ ಒಡೆದು ಹಣ ದೋಚಿದ್ದಾರೆ.

‘ಲಕ್ಷಾಂತರ ರೂಪಾಯಿ ಕಳ್ಳತನವಾಗಿದೆ’ ಎಂದು ದೇವಸ್ಥಾನದ ಸಮಿತಿಯಿಂದ ಜಯನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಶನಿವಾರ ರಾತ್ರಿ ಇದೇ ರೀತಿಯಾಗಿ ಜಯನಗರ ದಕ್ಷಿಣ ಬಡಾವಣೆಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳತನವಾಗಿತ್ತು. ಈ ಘಟನೆ ನಡೆದ ಮಾರನೇ ದಿನ ಮತ್ತೊಂದು ದೇಗುಲದ ಹುಂಡಿ ಒಡೆದಿದ್ದಾರೆ.

‘ಈಚೆಗೆ ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ದೇವಸ್ಥಾನದ ಹುಂಡಿಯನ್ನೂ ಬಿಡುತ್ತಿಲ್ಲ. ಕಳ್ಳರ ಪತ್ತೆಗೆ ಕ್ರಮಕೈಗೊಳ್ಳಬೇಕು. ಪೊಲೀಸರು ಒಂದು ಪ್ರತ್ಯೇಕ ತಂಡ ರಚಿಸಿ ಕಳ್ಳತನಕ್ಕೆ ಕಡಿವಾಣ ಹಾಕಬೇಕು’ ಎಂದು ಜಯನಗರ ನಿವಾಸಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT