ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಮಾಯ, ಆವರಣದಲ್ಲಿಯೇ ತ್ಯಾಜ್ಯಕ್ಕೆ ಬೆಂಕಿ

Last Updated 12 ಜುಲೈ 2021, 3:58 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಮಾಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೋವಿಡ್‌ ಎರಡನೇ ಅಲೆ ಹೆಚ್ಚಾಗಿದ್ದಾಗ ತಾಲ್ಲೂಕು ಆಸ್ಪತ್ರೆಯಲ್ಲಿ ಕೇವಲ ಲಸಿಕೆ ನೀಡುವತ್ತ ಮಾತ್ರ ಗಮನಹರಿಸಿದ್ದು, ಸ್ವಚ್ಛತೆ, ಶೌಚಾಲಯಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದನ್ನೇ ಮರೆತಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿವೆ.

ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಮೆಡಿಕಲ್ ತ್ಯಾಜ್ಯ, ಸಾಮಾನ್ಯ ತ್ಯಾಜ್ಯವನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡಬೇಕು. ಆದರೆ ಹಲವು ದಿನಗಳಿಂದ ಆಸ್ಪತ್ರೆ ಹಿಂಭಾಗದಲ್ಲಿಯೇ ತ್ಯಾಜ್ಯ ಸುಡುತ್ತಿದ್ದಾರೆ. ಈ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಬಾಟಲಿ, ಹ್ಯಾಂಡ್‌ಗ್ಲೌಸ್‌ ಸೇರಿದಂತೆ ಮೆಡಿಕಲ್‌ ತ್ಯಾಜ್ಯವು ಸೇರಿದೆ ಎಂಬ ಗುಮಾನಿ ವ್ಯಕ್ತವಾಗಿದೆ.

ಆರ್‌ಟಿಪಿಸಿಆರ್ ಘಟಕ ಬಳಿಯಲ್ಲಿನ ರಾಸಯನಿಕ ತ್ಯಾಜ್ಯದ ನೀರು ಸರಬರಾಜಾಗಲು ಪೈಪ್‍ ಆಳವಡಿಸಲಾಗಿದೆ. ಆದರೆ ಆ ಪೈಪ್‍ಗಳು ಒಡೆದು ತ್ಯಾಜ್ಯ ಸೋರುತ್ತಿದೆ. ಆ ಸ್ಥಳದಲ್ಲಿ ಪಾಚಿ ಮಾದರಿಯಲ್ಲಿ ನೀರು ಸಂಗ್ರಹವಾಗಿದೆ.

ರಚನೆಯಾಗದ ಆಸ್ಪತ್ರೆ ರಕ್ಷಾ ಸಮಿತಿ: ಸರ್ಕಾರಿ ಆಸ್ಪತ್ರೆಯ ಮೇಲ್ವಿಚಾರಣೆಗೆ ರಚನೆಯಾಗುತ್ತಿದ್ದ ರಕ್ಷಾ ಸಮಿತಿ (ಎಆರ್‌ಎಸ್‌ ಸಮಿತಿ) ವಿಸರ್ಜನೆಗೊಂಡು ಮೂರು ವರ್ಷ ಕಳೆದರೂ ಈವರೆಗೂ ಸಮಿತಿ ರಚಿಸಿಲ್ಲ. ಇದರಿಂದಾಗಿ ಆಸ್ಪತ್ರೆಯ ಮೇಲ್ವಿಚಾರಣೆ ಮಾಡುವವರಿಲ್ಲದೆ ಅವ್ಯವಸ್ಥೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT