ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾದಲ್ಲಿ ಕೋಮು ರಾಜಕೀಯ ಇಲ್ಲ, ಜನರ ಬಗ್ಗೆ ಭಯವಿದೆ: ಸಂಸದ ಚಂದ್ರ ಆರ್ಯ

Last Updated 12 ಜುಲೈ 2022, 4:59 IST
ಅಕ್ಷರ ಗಾತ್ರ

ತುಮಕೂರು: ಕೆನಡಾದಲ್ಲಿ ಕೋಮು ಸಂಘರ್ಷದ ರಾಜಕಾರಣವಿಲ್ಲ. ಆ ರಾಷ್ಟ್ರದಲ್ಲಿ ಜನರ ಬಗ್ಗೆ ರಾಜಕಾರಣಿಗಳಿಗೆ ಭಯವಿದೆ ಎಂದು ಕೆನಡಾ ಸಂಸದ ಚಂದ್ರ ಆರ್ಯ ಹೇಳಿದರು.

ಹಾಲಪ್ಪ ಪ್ರತಿಷ್ಠಾನ, ಮಾತೃಛಾಯ ಸಂಸ್ಥೆ, ಲಯನ್ಸ್, ರೋಟರಿ, ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ, ಆದರ್ಶ ಫೌಂಡೇಷನ್, ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆನಡಾ ಸಂಸತ್‌ನಲ್ಲಿ ಕನ್ನಡದಲ್ಲಿ ಮಾತನಾಡಿ ಗಮನಸೆಳೆದಿದ್ದ ಶಿರಾ ತಾಲ್ಲೂಕು ದ್ವಾರಾಳು ಗ್ರಾಮದ ಚಂದ್ರ ಆರ್ಯ ತಮ್ಮ ಬಾಲ್ಯ, ಹಳ್ಳಿಯಲ್ಲಿ ಕಳೆದ ಸಮಯವನ್ನು ನೆನಪು ಮಾಡಿಕೊಂಡರು.

ಕೆನಡಾದ ವ್ಯವಸ್ಥೆಗೂ, ಇಲ್ಲಿನ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಅಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ, ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅಂತಹವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವುದಿಲ್ಲ. ಇಲ್ಲಿಯಂತೆ ಕೋಮು ರಾಜಕಾರಣ ಇಲ್ಲ ಎಂದು ತಿಳಿಸಿದರು.

ಶಾಸಕ ಡಾ.ಜಿ. ಪರಮೇಶ್ವರ, ‘ಒಂದು ಕಾಲದಲ್ಲಿ ನಮ್ಮನ್ನಾಳಿದ ಬ್ರಿಟಿಷರ ದೇಶದಲ್ಲಿ ಕನ್ನಡಿಗರು ಸಂಸತ್ ಸದಸ್ಯರಾಗಿ ಆಳ್ವಿಕೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ. ಭಾರತೀಯರು ವಿಶ್ವದ ಸಾಕಷ್ಟು ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಗೆ ಎಚ್‍ಎಎಲ್ ಹೆಲಿಕಾಪ್ಟರ್ ಘಟಕ ಬಂದಿದ್ದು, ಇನ್ನೆರಡು ತಿಂಗಳಲ್ಲಿ ಹೆಲಿಕಾಪ್ಟರ್ ಹಾರಲಿದೆ. 18 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ನಿರ್ಮಾಣವಾಗಲಿದೆ. ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿ ಸುಮಾರು 5 ಲಕ್ಷ ವಿದ್ಯಾರ್ಥಿಗಳು ವಿವಿಧ ಕೋರ್ಸ್‍ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶಿಕ್ಷಣ ಕೇಂದ್ರವಾಗಿಯೂ ರೂಪುಗೊಂಡಿದೆ’ ಎಂದು ತಿಳಿಸಿದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ‘ದಕ್ಷಿಣ ಭಾರತದಿಂದ ಮೊಟ್ಟ ಮೊದಲ ಬಾರಿಗೆ, ಕೆನಡದಲ್ಲಿ ಮೂರನೇ ಬಾರಿಗೆ ಚಂದ್ರ ಆರ್ಯ ಸಂಸತ್ ಪ್ರವೇಶಿಸಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿ.ಪಂ ಸಿಇಒ ಕೆ. ವಿದ್ಯಾಕುಮಾರಿ, ಬಾಪೂಜಿ ವಿದ್ಯಾಸಂಸ್ಥೆಯ ಎಂ. ಬಸವಯ್ಯ, ಮುಖಂಡರಾದ ಆಡಿಟರ್ ಆಂಜಿನಪ್ಪ, ಸಾಗರನಹಳ್ಳಿ ಪ್ರಭು, ಪ್ರೊ.ಕೆ. ಚಂದ್ರಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT