ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್ | ಗಮನ ಬೇರೆಡೆ ಸೆಳೆದು ₹3.37 ಲಕ್ಷ ಅಪಹರಿಸಿದ ಕಳ್ಳರು

Published 25 ಜೂನ್ 2024, 14:29 IST
Last Updated 25 ಜೂನ್ 2024, 14:29 IST
ಅಕ್ಷರ ಗಾತ್ರ

ಕುಣಿಗಲ್: ಬಾರ್ ಕ್ಯಾಷಿಯರ್ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು ₹3.37 ಲಕ್ಷ ದೋಚಿ ಪರಾರಿಯಾದ ಘಟನೆ ಪಟ್ಟಣದ ಕುವೆಂಪು ನಗರದ ಎಸ್‌ಬಿಐ ಬ್ಯಾಂಕ್ ಬಳಿ ಮಂಗಳವಾರ ನಡೆದಿದೆ.

ಪಟ್ಟಣದ ಜೆ.ಕೆ.ಬಾರ್ ಕ್ಯಾಷಿಯರ್ ನಂದೀಶ್ ಹಣ ಕಳೆದುಕೊಂಡವರು.

₹5.30 ಲಕ್ಷವನ್ನು ಬ್ಯಾಂಕ್‌ಗೆ ಕಟ್ಟಲು ತಂದಿದ್ದು, ಹಣ ಸ್ವೀಕರಿಸುವ ಯಂತ್ರದಲ್ಲಿ ಸ್ವಲ್ಪ ಹಣ ಹಾಕಿದ್ದರು. ಉಳಿದ ಹಣವನ್ನು ಬೈಕ್ ಟ್ಯಾಂಕ್ ಮೇಲೆ ಪ್ಲಾಸ್ಟಿಕ್ ಕವರ್‌ನಲ್ಲಿಟ್ಟಿದ್ದರು. ಅಪರಿಚಿತ ವ್ಯಕ್ತಿ ಬೈಕ್ ಪಕ್ಕದಲ್ಲಿ ಬಿದ್ದಿದ್ದ ನೂರು ರೂಪಾಯಿ ನೋಟ್ ತೋರಿಸಿ ತೆಗೆದುಕೊಳ್ಳಲು ಹೇಳಿದ್ದಾರೆ. ನಂದೀಶ್ ನೋಟನ್ನು ತೆಗೆದುಕೊಳ್ಳಲು ಹೋದಾಗ ಹಣವಿದ್ದ ಕವರ್ ತೆಗೆದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ನಂದೀಶ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT