ಬುಧವಾರ, ನವೆಂಬರ್ 20, 2019
27 °C

ಜಯಂತಿ ಮಾಡಲು ಟಿಪ್ಪು ಸಂತ ಏನ್ರಿ?: ಮಾಧುಸ್ವಾಮಿ ಪ್ರಶ್ನೆ

Published:
Updated:

ತುಮಕೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್.ಸಿ.ಇ.ಪಿ.) ಒಪ್ಪಂದ ಜಾರಿಯಿಂದ ರಾಜ್ಯದ ಹೈನೋದ್ಯಮ ಹಾಳಾಗಲು ಬಿಡುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದರು.

ರಾಜ್ಯೋತ್ಸವ ಸಮಾರಂಭದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ನಿತ್ಯ 70 ರಿಂದ 80 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಗ್ರಾಮೀಣರ ಬದುಕಿಗೂ ಹೈನು ಆಧಾರವಾಗಿದೆ. ಒಪ್ಪಂದದಿಂದ ಅವರ ಜೀವನಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿ ಈ ಅಂಶವನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಜಾರಿಯಲ್ಲಿದೆ ಎಂದು ತಿಳಿಸಿದರು.

ಜಯಂತಿ ಮಾಡಲು ಟಿಪ್ಪು ಸಂತ ಏನ್ರಿ? 

ಟಿಪ್ಪು ಜಯಂತಿ ಆಚರಣೆ ವಿಚಾರ ಕೇಳಿದಾಗ ಉತ್ತರಿಸಲು ಆರಂಭದಲ್ಲಿ ಸಚಿವರು ನಿರಾಕರಿಸಿದರು. 

ನಿಮ್ಮ ವೈಯಕ್ತಿಕ ನಿಲುವಾದರೂ ತಿಳಿಸಿ ಎಂದು ಒತ್ತಾಯಿಸಿದಾಗ, ನೋಡ್ರಿ ಟಿಪ್ಪು ಒಬ್ಬ ರೂಲರ್ (ಆಳ್ವಿಕೆಗಾರ). ಸೇಂಟ್ (ಸಂತ) ಅಲ್ಲ. ಸರ್ಕಾರ ಜಾತಿ ಕಾರಣಕ್ಕೂ, ನಡತೆಯ ಕಾರಣಕ್ಕೊ ಸದ್ಗುರು, ಸಾಧು, ಸಂತ, ಶರಣರ ಜಯಂತಿ ಮಾಡುತ್ತ ಬಂದಿದೆ. ಆಳ್ವಿಕೆಗಾರರ ಜಯಂತಿ ಮಾಡುತ್ತಿಲ್ಲ. ಅದಲ್ಲದೆ ಮಹಮ್ಮದಿಯರಲ್ಲಿ ಜಯಂತಿಗಳ ಆಚರಣೆ ಇಲ್ಲ ಎಂದರು.

ಹಿಂದಿನ ಸರ್ಕಾರ ಟಿಪ್ಪು ಜಯಂತಿ ಘೋಷಣೆ ಮಾಡಿದ ದಿನದಿಂದಲೂ ನಮ್ಮ ಪಕ್ಷ ಅದನ್ನು ವಿರೋಧಿಸುತ್ತಾ ಬಂದಿದೆ. ಆ ನಿಲುವಿಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿ ಪತ್ರಿಕಾಗೋಷ್ಠಿ ಮುಗಿಸಿದರು.

ಪ್ರತಿಕ್ರಿಯಿಸಿ (+)