ಮಂಗಳವಾರ, ಆಗಸ್ಟ್ 16, 2022
21 °C

ನಿಧಿ ಶೋಧ: ಹತ್ತು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ತಾಲ್ಲೂಕಿನ ಗಾಣದಹುಣಸೆ ಗ್ರಾಮದ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ನಿಧಿ ಶೋಧಿಸಿಸುತ್ತಿದ್ದ ಆರೋಪ‍ದ ಮೇಲೆ ಹತ್ತು ಜನರನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಡಿ. 6ರಂದು ತಡರಾತ್ರಿ ಗುಂಪೊಂದು ಗುಂಡಿ ತೊಡಿ ಪೂಜಾ ಸಾಮಗ್ರಿ ಹಾಗೂ ಸ್ಪೋಟಕ ಬಳಸಿ ನಿಧಿ ಶೋಧಿಸುತ್ತಿದ್ದಾರೆ ಎಂದು ಬುಕ್ಕಾಪಟ್ಟಣ ಹೋಬಳಿ ಕಂದಾಯ ನಿರೀಕ್ಷಕ ಶ್ರೀನಿವಾಸ್ ತಾವರೆಕೆರೆ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ರಾಜ್ಯದ ವಿವಿಧ ಭಾಗಗಳ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ  ಕಾರು, ಮೂರು ಬೈಕ್, ಪೂಜಾ ಸಾಮಗ್ರಿ ಹಾಗೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತಿಪಟೂರು ನಗರದ ವಿಜಯಕುಮಾರ್, ತಿಪಟೂರು ತಾಲ್ಲೂಕಿನ ಜಯಂತಿ ಗ್ರಾಮದ ಗಿರಿಯಪ್ಪ, ಶಿರಾ ತಾಲ್ಲೂಕಿನ ಕಲ್ಲುಕೋಟೆಯ ನಾಗಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಮಂಜುನಾಥ್, ಮಾಲೂರು ತಾಲ್ಲೂಕಿನ ಭೈರೇನಹಳ್ಳಿ ಗ್ರಾಮದ ಸಂತೋಷ್ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಕೆ.ಎನ್.ಶ್ರೀನಿವಾಸ್ ಹಾಗೂ ಓಬಳೇಶ್ ರೆಡ್ಡಿ, ಹಾಸನ ಜಿಲ್ಲೆಯ ತಿರುಪತಿಹಳ್ಳಿ ಗ್ರಾಮದ ಕುಮಾರನಾಯ್ಕ, ಬಳ್ಳಾರಿ ಜಿಲ್ಲೆಯ ಉಪ್ಪಿನನಾಯಕನಹಳ್ಳಿ ಗ್ರಾಮದ ಪರಶುರಾಮ, ಶಿವಮೊಗ್ಗ ನಗರದ ದೇವದಾಸ್ ಬಂಧಿತ ಆರೋಪಿಗಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು