ತುಮಕೂರು: ತರಕಾರಿ ಬೆಲೆಯಲ್ಲಿ ಮತ್ತೆ ಏರಿಳಿತ ಕಂಡು ಬಂದಿದ್ದು, ಸೊಪ್ಪು ಇಳಿಕೆಯತ್ತ ಮುಖ ಮಾಡಿದೆ. ಬಾಳೆಹಣ್ಣು ತುಸು ಕಡಿಮೆಯಾಗಿದ್ದು, ಮೀನು ಸ್ವಲ್ಪ ಮಟ್ಟಿಗೆ ತಗ್ಗಿದೆ.

ದುಬಾರಿಯಾಗಿ, ಇಳಿಕೆ ಕಂಡಿದ್ದ ಬೀನ್ಸ್ ದರ ಮತ್ತೆ ಏರಿಕೆ ದಾಖಲಿಸಿದ್ದು, ಕೆ.ಜಿ ₹50–60ಕ್ಕೆ ಜಿಗಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹80ರ ವರೆಗೂ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಕಳೆದ ಎರಡು ವಾರಗಳಿಂದ ಏರಿಕೆಯತ್ತ ಸಾಗಿದ್ದ ಟೊಮೆಟೊ ಈ ವಾರ ಇಳಿಕೆಯತ್ತ ಹೆಜ್ಜೆ ಹಾಕಿದೆ.

ಗಡ್ಡೆಕೋಸು, ಬದನೆಕಾಯಿ, ತೊಂಡೆಕಾಯಿ, ನುಗ್ಗೆಕಾಯಿ ತುಸು ಅಗ್ಗವಾಗಿದ್ದರೆ, ಬೆಂಡೆಕಾಯಿ, ಹೂಕೋಸು ಕೊಂಚ ಏರಿಕೆಯಾಗಿದೆ. ಸೌತೆಕಾಯಿ, ನಿಂಬೆಹಣ್ಣು ಸಹ ದುಬಾರಿಯಾಗಿದೆ.

ಇಳಿಕೆಯತ್ತ ಸೊಪ್ಪು: ಎರಡು ವಾರಗಳಿಂದ ಸೊಪ್ಪಿನ ಬೆಲೆ ಕಡಿಮೆಯಾಗುತ್ತಾ ಸಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹40–50, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಇಳಿಕೆಯಾಗಿದೆ.

ಬಾಳೆಹಣ್ಣು ಅಗ್ಗ: ₹100ರ ಗಡಿ ತಲುಪಿದ್ದ ಏಲಕ್ಕಿ ಬಾಳೆಹಣ್ಣು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಈ ವಾರ ಮತ್ತಷ್ಟು ಇಳಿಕೆ ದಾಖಲಿಸಿದೆ. ಕರಬೂಜ, ಕಲ್ಲಂಗಡಿ ಹಣ್ಣು ಏರಿಕೆಯತ್ತ ಹೆಜ್ಜೆ ಹಾಕಿದ್ದರೆ, ಸೀಬೆ, ಪೈನಾಪಲ್, ಪಪ್ಪಾಯ ಬೆಲೆ ಕಡಿಮೆಯಾಗಿದೆ.

ಅಡುಗೆ ಎಣ್ಣೆ ಏರಿಕೆ: ಅಡುಗೆ ಎಣ್ಣೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಬಹುದು ಎಂದು ಹೇಳಲಾಗುತ್ತಿದೆ. ಗೋಲ್ಡ್ವಿನ್ನರ್ ಕೆ.ಜಿ ₹148–150, ಪಾಮಾಯಿಲ್ ಕೆ.ಜಿ ₹121–122, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಬೇಳೆ ಧಾನ್ಯ: ಬೇಳೆ, ಧಾನ್ಯಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಸಕ್ಕರೆ, ಬೆಲ್ಲ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ದರವೂ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಒಣಹಣ್ಣಗಳು ಮತ್ತಷ್ಟು ದುಬಾರಿಯಾಗಿವೆ.

ಧನ್ಯ ಕೆ.ಜಿ ₹110–120, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–240, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹180–190, ಬೆಲ್ಲ ಕೆ.ಜಿ ₹50–58, ಕಾಳುಮೆಣಸು ಕೆ.ಜಿ ₹720–750, ಜೀರಿಗೆ ಕೆ.ಜಿ ₹250–260, ಚಕ್ಕೆ ಕೆ.ಜಿ ₹240–250, ಲವಂಗ ಕೆ.ಜಿ ₹820–840, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,600, ಏಲಕ್ಕಿ ಕೆ.ಜಿ ₹3,200–3,400, ಬಾದಾಮಿ ಕೆ.ಜಿ ₹780–800, ಗೋಡಂಬಿ ಕೆ.ಜಿ ₹850–950, ಒಣ ದ್ರಾಕ್ಷಿ ಕೆ.ಜಿ ₹440–450ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಏರಿಕೆ: ಕೋಳಿ ಮಾಂಸದ ಬೆಲೆ ಏರಿಕೆ ದಾಖಲಿಸಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹150, ರೆಡಿ ಚಿಕನ್ ಕೆ.ಜಿ ₹225, ಸ್ಕಿನ್ಲೆಸ್ ಕೆ.ಜಿ ₹250ಕ್ಕೆ ಹೆಚ್ಚಳವಾಗಿದೆ.

ಅಂಜಲ್ ಮೀನು ಅಗ್ಗ: ಮೀನಿನ ಧಾರಣೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಅಂಜಲ್ ಮೀನು ಅಗ್ಗವಾಗಿದೆ. ಬಂಗುಡೆ ಕೆ.ಜಿ ₹240, ಬೂತಾಯಿ ₹340, ಬೊಳಿಂಜರ್ ₹220, ಅಂಜಲ್ ಕೆ.ಜಿ ₹610, ಬಿಳಿಮಾಂಜಿ ಕೆ.ಜಿ 1,050, ಕಪ್ಪುಮಾಂಜಿ ₹730, ಸೀಗಡಿ ಕೆ.ಜಿ ₹500–810, ಏಡಿ ಕೆ.ಜಿ ₹610ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.