ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ರೈತರಿಂದ ಖರೀದಿಸುವ ಹಾಲಿನ ದರ ₹2.50 ಹೆಚ್ಚಳ

Last Updated 15 ಮಾರ್ಚ್ 2022, 14:18 IST
ಅಕ್ಷರ ಗಾತ್ರ

ತುಮಕೂರು: ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹2.50 ಹೆಚ್ಚಳ ಮಾಡಲು ಮಂಗಳವಾರ ನಡೆದ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಸಭೆಯಲ್ಲಿ ನಿರ್ಧರಿಸಲಾಗಿದೆ.

ರೈತರಿಗೆ ಯುಗಾದಿ ಹಬ್ಬದ ಕೊಡುಗೆ ನೀಡಿದ್ದು, ಹೊಸ ದರ ಬುಧವಾರದಿಂದಲೇ ಜಾರಿಗೆ ಬರಲಿದೆ. ಆದರೆ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಈಗಿರುವ ಬೆಲೆಯೇ ಮುಂದುವರಿಯಲಿದೆ ಎಂದು ತುಮುಲ್ ಮೂಲಗಳು ತಿಳಿಸಿವೆ.

ಕೋವಿಡ್ ನಂತರ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದ್ದು, ಬೇಸಿಗೆಯಲ್ಲಿ ಹಾಲು ಉತ್ಪಾದನೆಯೂ ಕಡಿಮೆಯಾಗಿದ್ದು ಬೇಡಿಕೆ ಹೆಚ್ಚಳವಾಗಿದೆ. ಜತೆಗೆ ಬೆಣ್ಣೆ ಹಾಗೂ ಹಾಲಿನ ಪುಡಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಡೇರಿಯಲ್ಲಿ ದಾಸ್ತಾನಿದ್ದ ಬಹುಪಾಲು ಬೆಣ್ಣೆ, ಹಾಲಿನ ಪುಡಿ ಮಾರಾಟವಾಗಿದೆ. ಇದರಿಂದಾಗಿ ತುಮುಲ್ ಲಾಭದತ್ತ ಹೆಜ್ಜೆ ಹಾಕಿದ್ದು, ರೈತರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡಿದೆ.

ಕೋವಿಡ್ ತೀವ್ರ ಸ್ವರೂಪ ಪಡೆದುಕೊಂಡ ನಂತರ ಹಾಗೂ ಎರಡನೇ ಅಲೆ ಸಮಯದಲ್ಲಿ (8–6–2021) ರೈತರಿಂದ ಖರೀದಿಸುವ ಹಾಲು ದರವನ್ನು ಲೀಟರ್‌ಗೆ ₹2 ಇಳಿಕೆ ಮಾಡಲಾಗಿತ್ತು. ಸುಮಾರು ಹತ್ತು ತಿಂಗಳ ನಂತರ ಹಾಲಿನ ಬೆಲೆ ಹೆಚ್ಚಳ ಮಾಡಲಾಗಿದೆ.

ಯಾವ ಹಾಲಿಗೆ ಎಷ್ಟು: 3.5 ಜಿಡ್ಡಿನಂಶವುಳ್ಳ ಇರುವ ಹಾಲಿಗೆ ಲೀಟರ್‌ಗೆ ₹27.50 ಹಾಗೂ 4.1 ಜಿಡ್ಡಿನಂಶದ ಹಾಲಿಗೆ ₹28.92 ನೀಡಲಾಗುತ್ತದೆ. ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಾಲಿನಲ್ಲಿ ಸರಾಸರಿ 4.1ರಷ್ಟು ಕೊಬ್ಬಿನಂಶ ಇರಲಿದ್ದು, ಬಹುತೇಕ ರೈತರಿಗೆ ಲೀಟರ್‌ಗೆ ₹28.92 ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT