ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ವರ್ಷದಲ್ಲಿ ಕಿತ್ತು ಹೋದ ರಸ್ತೆ: ಕಳಪೆ ಕಾಮಗಾರಿ ಆರೋಪ

Published 25 ಜೂನ್ 2023, 15:42 IST
Last Updated 25 ಜೂನ್ 2023, 15:42 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿಯ ದಸೂಡಿ-ಸೋಮನಹಳ್ಳಿ ರಸ್ತೆಯಿಂದ ನುಲೇನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಒಂದೇ ವರ್ಷದಲ್ಲಿ ಹಾಳಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದಸೂಡಿ ರಸ್ತೆಯ ರಂಗನಗುಡ್ಡಕ್ಕೆ ಹೊಂದಿಕೊಂಡಿರುವ ಕಟ್ಟೆಯಿಂದ ನುಲೇನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿದೆ. ಈ ರಸ್ತೆಯನ್ನು ವರ್ಷದ ಹಿಂದೆ ಜಲ್ಲಿಯಿಂದ ಕಾಮಗಾರಿ ಮಾಡಲಾಗಿದೆ. ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು ಒಂದು ಕಿ.ಮೀ ದೂರವಿದ್ದರೂ ಅದರಲ್ಲಿ 200 ಮೀಟರ್‌ನಷ್ಟು ರಸ್ತೆ ಕಾಮಗಾರಿ ಮಾತ್ರ ಮಾಡಲಾಗಿದೆ. ರಸ್ತೆಗೆ ಜಲ್ಲಿ ಹಾಕಿ ಕಡಿಮೆ ಪ್ರಮಾಣದಲ್ಲಿ ಮಣ್ಣು ಹಾಕಿ ಹಾಗೆಯೇ ಬಿಟ್ಟಿದ್ದಾರೆ.

ಜೆಲ್ಲಿ ಹಾಗೂ ಮಣ್ಣಿನ ಮೇಲೆ ರೋಲ್‌ ಮಾಡದಿರುವ ಕಾರಣ ಜಲ್ಲಿ ಎದ್ದು ಹೋಗಿದೆ. ಜಲ್ಲೆ ರಸ್ತೆಯ ಮೇಲೆ ಚಲ್ಲಾಡಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ವಾಹನ ಸವಾರರು ದೂರುತ್ತಾರೆ. 

ಕಳಪೆ ಗುಣಮಟ್ಟದ ಕಾಮಗಾರಿಯಾಗಿದ್ದು, ಸಂಬಂಧಪಟ್ಟವರು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT