ತುಮಕೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಎಲ್ಲೆಡೆ ಆತಂಕದ ವಾತಾವರಣ ಮನೆ ಮಾಡಿದೆ. ರೈತರು ಸಕಾಲಕ್ಕೆ ಬಿತ್ತನೆ ಮಾಡಲಾಗದೆ ಮುಗಿಲಿನತ್ತ ಮುಖ ಮಾಡಿದ್ದಾರೆ.

ಈ ವೇಳೆಗಾಗಲೇ ಮುಂಗಾರು ಪೂರ್ವದಲ್ಲಿ ಬಿತ್ತನೆ ಮಾಡಿದ್ದ ಫಸಲು ಕೊಯ್ಲುಮಾಡಿ, ಮುಂಗಾರು ಬಿತ್ತನೆ ಕೆಲಸವನ್ನು ಪೂರ್ಣಗೊಳಿಸುವ ಹಂತಕ್ಕೆ ಬರುತ್ತಿದ್ದರು. ಆದರೆ ಜೂನ್, ಜುಲೈ ತಿಂಗಳಲ್ಲಿ ವರುಣನ ಮುನಿಸು ಕಂಡು ದಿಕ್ಕು ತೋಚದಂತಾಗಿದೆ. ಇನ್ನೂ ಕೆಲವು ದಿನಗಳು ಇದೇ ಪರಿಸ್ಥಿತಿ ಮುಂದುವರಿದರೆ ಮುಂದೇನು? ಎಂಬ ಚಿಂತೆಯಲ್ಲಿದ್ದಾರೆ. ಮನದಲ್ಲೇ ವರುಣ ಪ್ರಾರ್ಥನೆ ನಡೆಸಿದ್ದಾರೆ.

ಮುಗಿಲು ಕಪ್ಪಾಗುವುದು, ಮೋಡ ದಟ್ಟೈಸುವುದು, ಕೆಲ ಸಮಯ ಕತ್ತಲೆಯ ವಾತಾವರಣ ನಿರ್ಮಾಣವಾಗುವುದು. ಇನ್ನೇನು ಜೋರು ಮಳೆ ಬಂತು ಎನ್ನುವಷ್ಟರಲ್ಲಿ ಮೋಡ ಮರೆಯಾಗಿ ನಾಲ್ಕು ಹನಿಗಳೂ ಭೂಮಿಗೆ ಬೀಳುತ್ತಿಲ್ಲ. ಪ್ರತಿ ದಿನವೂ ವಾತಾವರಣದಲ್ಲಿ ಇಂತಹುದೇ ಸ್ಥಿತಿ ಕಂಡುಬರುತ್ತಿದೆ. ವರುಣನ ಕಣ್ಣಾಮುಚ್ಚಾಲೆ ಆಟ ಕಂಡವರು ದಿಗಿಲುಗೊಂಡಿದ್ದಾರೆ. ‘ನಮ್ಮ ಕೈಯಲ್ಲಿ ಏನಿದೆ. ಎಲ್ಲ ಅವನೇ ಕುರುಣಿಸಬೇಕು’ ಎಂದು ರೈತ ಸಂಜೀವಪ್ಪ ಮುಗಿಲಿನತ್ತ ಕೈ ತೋರಿಸುತ್ತಾರೆ.

ದಿನಗಳು ಕಳೆದಂತೆ ಪರಿಸ್ಥಿತಿ ಬಿಗಡಾಯಿಸುವಂತೆ ಕಾಣುತ್ತಿದೆ. ಒಂದು ವರ್ಷ ಮಳೆಯಾದರೆ ಮತ್ತೊಂದು ವರ್ಷ ಬರ ಎಂಬ ಸ್ಥಿತಿಯನ್ನು ನೆನೆದವರು ಆತಂಕಿತರಾಗಿದ್ದಾರೆ. ಹಿಂದಿನ ವರ್ಷ ಸಾಧಾರಣವಾಗಿ ಬಿದ್ದಿತ್ತು. ಈ ವರ್ಷವೂ ವರುಣನ ದಯೆ ನಮ್ಮ ಕಡೆ ಇರಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ. ಅಲ್ಲಲ್ಲಿ ಕಪ್ಪೆ, ಕತ್ತೆ, ಓತಿಕ್ಯಾತ ಮದುವೆ ಮಾಡಿ ಮೊರೆ ಇಡುತ್ತಿದ್ದಾರೆ.

ಜಿಲ್ಲೆ ಸ್ಥಿತಿ: ಜಿಲ್ಲೆಯಲ್ಲಿ ಜೂನ್ನಲ್ಲಿ ಸರಾಸರಿ ವಾಡಿಕೆ 59 ಮಿ.ಮೀ ಮಳೆಯಾಗಬೇಕಿದ್ದು, ಕೇವಲ 35 ಮಿ.ಮೀ ಬಿದ್ದಿದೆ. ಜೂನ್ನಿಂದ ಜುಲೈ 15ರ ವರೆಗೆ ವಾಡಿಕೆ 88 ಮಿ.ಮೀ ಬೀಳಬೇಕಿದ್ದು, 55 ಮಿ.ಮೀ ಸುರಿದಿದೆ. ಜುಲೈ 1ರಿಂದ 15ರ ವರೆಗೆ 29 ಮಿ.ಮೀ ಮಳೆ ಆಗಬೇಕಿದ್ದು, ಕೇವಲ 19 ಮಿ.ಮೀ ಸುರಿದಿದೆ. ಅದೂ ನಿರಂತರವಾಗಿ ಅಥವಾ ಜೋರು ಮಳೆಯಾಗಿಲ್ಲ. ಅಲ್ಲಲ್ಲಿ ಭೂಮಿಯ ಮೇಲು ಭಾಗ ತೇವ ಮಾಡುವಷ್ಟು ಬೀಳುತ್ತದೆ. ಸ್ವಲ್ಪ ಬಿಸಿಲು ಬಂದರೆ, ಜೋರಾಗಿ ಗಾಳಿ ಬೀಸಿದರೆ ಒಣಗಿ ಹೋಗುತ್ತದೆ. ಯಾವ ಬೆಳೆಗೂ ಉಪಯೋಗ ಇಲ್ಲವಾಗಿದೆ.

ಮಳೆ ವಿವರ: ಜುಲೈ 1ರಿಂದ 15ರ ವರೆಗೆ ಮಧುಗಿರಿ ತಾಲ್ಲೂಕಿನಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ವಾಡಿಕೆ 35 ಮಿ.ಮೀಗೆ ಕೇವಲ 10 ಮಿ.ಮೀ (ಶೇ 70ರಷ್ಟು ಕೊರತೆ) ಬಿದ್ದಿದೆ. ತುಮಕೂರು ತಾಲ್ಲೂಕಿನಲ್ಲಿ ವಾಡಿಕೆ 52 ಮಿ.ಮೀಗೆ 26 ಮಿ.ಮೀ, ತುರುವೇಕೆರೆ ತಾಲ್ಲೂಕು ವಾಡಿಕೆ 24 ಮಿ.ಮೀಗೆ 11 ಮಿ.ಮೀ, ಕುಣಿಗಲ್ ತಾಲ್ಲೂಕು 29 ಮಿ.ಮೀಗೆ 23 ಮಿ.ಮೀ ಸುರಿದಿದೆ. ಗುಬ್ಬಿ, ಶಿರಾ ತಾಲ್ಲೂಕಿನಲ್ಲೂ ಇಂತಹುದೇ ಪರಿಸ್ಥಿತಿ ಇದೆ. ಉಳಿದ ತಾಲ್ಲೂಕುಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಕರೆ, ಕಟ್ಟೆಗಳು ಬರಿದಾಗಿದ್ದು, ಕೊಳವೆ ಬಾವಿಗಳಲ್ಲಿ ಒರತೆ ತಗ್ಗಿದೆ. ಸಾಕಷ್ಟು ಕಡೆಗಳಲ್ಲಿ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿತ ಕಂಡಿದೆ. ಹೇಮಾವತಿ ನಾಲೆಯಿಂದ ನೀರು ಹರಿಸುವ ಪ್ರದೇಶಗಳನ್ನು ಹೊರತುಪಡಿಸಿದರೆ ಇತರೆಡೆಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ನೀರಿಗೆ ಸಮಸ್ಯೆ; ಖಾಸಗಿ ಬೋರ್ವೆಲ್ ಮೊರೆ

ಮಳೆಗಾಲದಲ್ಲೇ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು ಕೊಳವೆ ಬಾವಿಗಳು ಬರಿದಾಗುತ್ತಿವೆ. ಜಿ.ಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕೊರೆಸಿದ್ದ ಕೊಳವೆ ಬಾವಿಗಳು ಬತ್ತಿದ್ದು ಜಿಲ್ಲೆಯ 16 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತ್ತಿಘಟ್ಟ ಕಂಪನಹಳ್ಳಿ ಕರಡಿಸಾಬರಪಾಳ್ಯ ಕುಣಿಗಲ್ ತಾಲ್ಲೂಕಿನ ಮುದುಗಿರಿಪಾಳ್ಯ ಕಿಚ್ಚವಾಡಿ ಕೀಲಾರಕೊಪ್ಪಲು ಬೀರಗಾನಹಳ್ಳಿ ಈರಮೇಸ್ತ್ರಿಪಾಳ್ಯ ಮಧುಗಿರಿ ತಾಲ್ಲೂಕಿನ ಬಸ್ಮಂಗಿಕಾವಲ್ ವೀರಕ್ಯಾತನಪಾಳ್ಯ ಶಿರಾ ತಾಲ್ಲೂಕು ಕಳುವರಹಳ್ಳಿ ಬಂಗಾರಿಹಟ್ಟಿ ತಿಪಟೂರು ತಾಲ್ಲೂಕು ಶೆಟ್ಟಿಹಳ್ಳಿ ಸಿಡ್ಲೇಹಳ್ಳಿ ನ್ಯಾಕೇನಹಳ್ಳಿ ತುಮಕೂರು ತಾಲ್ಲೂಕು ಭೋವಿಪಾಳ್ಯ ಹಿರೆಗುಂಡಗಲ್ಲು ದೊಡ್ಡಗೊಲ್ಲಹಳ್ಳಿ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಯಿಂದ ನೀರು ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ 152 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಕುಣಿಗಲ್ ತಾಲ್ಲೂಕಿನಲ್ಲಿ ಅತಿ ಹೆಚ್ಚು 38 ತಿಪಟೂರು 31 ಪಾವಗಡ 22 ಮಧುಗಿರಿ ತಾಲ್ಲೂಕಿನ 21 ಹಳ್ಳಿಗಳನ್ನು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.