ತುಮಕೂರು: ಹಾಲು ಉತ್ಪಾದಕರು ನಿಧನ ಹೊಂದಿದ ಸಮಯದಲ್ಲಿ ನೀಡುತ್ತಿದ್ದ ಮರಣ ಪರಿಹಾರವನ್ನು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ನಿಲ್ಲಿಸಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

75 ವರ್ಷ ದಾಟಿದ ಹಾಲು ಉತ್ಪಾದಕರು ಮೃತಪಟ್ಟರೆ ಪರಿಹಾರ ಧನ ನೀಡುವುದನ್ನು ನಿಲ್ಲಿಸಲಾಗಿದೆ. ಆದರೆ 75 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೃತಪಟ್ಟರೆ ನೆರವು ನೀಡುವುದನ್ನು ಮುಂದುವರಿಸಲಾಗಿದೆ.

ಹಾಲು ಉತ್ಪಾದಕರು ಸಾವನ್ನಪ್ಪಿದರೆ ಒಂದು ಬಾರಿಗೆ ₹50 ಸಾವಿರ ಪರಿಹಾರ ನೀಡುವ ಯೋಜನೆಯನ್ನು ‘ರೈತರ ಕಲ್ಯಾಣ ಟ್ರಸ್ಟ್’ ಮೂಲಕ ತುಮುಲ್ ಹಲವು ವರ್ಷಗಳ ಹಿಂದೆ ಜಾರಿ ಮಾಡಿತ್ತು. ಡೇರಿಗಳಿಗೆ ಹಾಲು ಸರಬರಾಜು ಮಾಡುವ ರೈತರು ಮೃತಪಟ್ಟ ಸಮಯದಲ್ಲಿ ₹50 ಸಾವಿರ ಪರಿಹಾರ ಕೊಡಲಾಗುತಿತ್ತು. ಈ ಸಮಯದಲ್ಲಿ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲರಿಗೂ ಪರಿಹಾರ ನೀಡಲಾಗುತಿತ್ತು.

ಹಾಲು ಸರಬರಾಜು ಮಾಡುತ್ತಿದ್ದ ಮಾನದಂಡದ ಆಧಾರದ ಮೇಲೆ ಪರಿಹಾರ ಮಂಜೂರು ಮಾಡಲಾಗುತಿತ್ತು. ಸಾವನ್ನಪ್ಪಿದ ದಿನಕ್ಕಿಂತ ಎರಡು ತಿಂಗಳ ಹಿಂದಿನಿಂದ ಹಾಲು ಸರಬರಾಜು ಮಾಡಿದ್ದರೆ ಸಾಕಿತ್ತು. ಅಂತಹವರಿಗೆ ಮರಣ ಪರಿಹಾರ ನೀಡುವ ವ್ಯವಸ್ಥೆ ಜಾರಿಯಲ್ಲಿತ್ತು.

ಈ ವರ್ಷದ ಜನವರಿಯಲ್ಲಿ ತುಮುಲ್ಗೆ ನಡೆದ ಚುನಾವಣೆಯಲ್ಲಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂತು. ಶಾಸಕ ಎಚ್.ವಿ.ವೆಂಕಟೇಶ್ ನೇತೃತ್ವದ ತಂಡ ಅಧಿಕಾರ ವಹಿಸಿಕೊಂಡಿತು. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ 75 ವರ್ಷ ದಾಟಿದವರು ಮೃತಪಟ್ಟರೆ ಪರಿಹಾರ ನೀಡದಿರುವ ನಿರ್ಧಾರ ತೆಗೆದುಕೊಂಡಿದೆ. ಇಂತಹವರಿಗೆ ಪರಿಹಾರ ನೀಡಿದರೆ ಆರ್ಥಿಕ ಹೊರೆಯಾಗಲಿದೆ ಎಂಬ ಕಾರಣ ನೀಡಿ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾಲು ಉತ್ಪಾದಕರಿಂದ ಸಂಗ್ರಹಿಸುವ ಹಣದಿಂದ ಮರಣ ಪರಿಹಾರ ನೀಡಲಾಗುತ್ತಿದೆ. ಒಂದು ಲೀಟರ್ ಹಾಲಿಗೆ 10 ಪೈಸೆಯಂತೆ ರೈತರ ಕಲ್ಯಾಣ ಟ್ರಸ್ಟ್ಗೆ ಹಣ ಸಂಗ್ರಹ ಮಾಡಲಾಗುತ್ತಿದೆ. ಈ ನಿಧಿಯನ್ನೇ ಬಳಸಿಕೊಂಡು ಪರಿಹಾರ ಕೊಡಲಾಗುತಿತ್ತು.

ಮಾನದಂಡ ಬದಲಾಗಬೇಕು

ನಿರಂತರವಾಗಿ ದಶಕಗಳ ಕಾಲ ಡೇರಿಗೆ ಹಾಲು ಸರಬರಾಜು ಮಾಡಿಕೊಂಡು ಬಂದು 75 ವರ್ಷ ದಾಟಿದವರು ಮೃತಪಟ್ಟರೆ ಪರಿಹಾರ ನೀಡುವ ವ್ಯವಸ್ಥೆ ಮುಂದುವರಿಸಬೇಕು. ಪರಿಹಾರ ಪಡೆದುಕೊಳ್ಳುವ ಉದ್ದೇಶದಿಂದ 70 ವರ್ಷ ಅಥವಾ ಅದಕ್ಕಿಂತ ವಯಸ್ಸಾದವರ ಹೆಸರಿನಲ್ಲಿ ಹೊಸದಾಗಿ ಹಾಲು ಸರಬರಾಜಿಗೆ ಅವಕಾಶ ಮಾಡಿಕೊಡಬಾರದು. ಅಲ್ಪ ಕಾಲ ಹಾಲು ಸರಬರಾಜು ಮಾಡಿದವರಿಗೆ ಪರಿಹಾರ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಸತತವಾಗಿ ಹಾಲು ಸರಬರಾಜು ಮಾಡುವವರಿಗೆ ಪರಿಹಾರ ನೀಡಬೇಕು ಎಂದು ರೈತ ನಟರಾಜ್ ಒತ್ತಾಯಿಸುತ್ತಾರೆ.

18ಕ್ಕೆ ಸರ್ವ ಸದಸ್ಯರ ಸಭೆ

ತುಮುಲ್ ಸರ್ವ ಸದಸ್ಯರ ಸಭೆ ಸೆ. 18ರಂದು ನಡೆಯಲಿದ್ದು 75 ವರ್ಷ ದಾಟಿದವರು ಮೃತಪಟ್ಟರೂ ಮರಣ ಪರಿಹಾರ ನೀಡುವಂತೆ ಹಾಲು ಉತ್ಪಾದಕರು ಒತ್ತಾಯಿಸಲು ಮುಂದಾಗಿದ್ದಾರೆ. ಪರಿಹಾರ ನೀಡಲು ವಯಸ್ಸಿನ ಮಾನದಂಡ ಅನುಸರಿಸಬಾರದು. ₹50 ಸಾವಿರ ದೊಡ್ಡ ಹೊರೆಯಾಗುವುದಿಲ್ಲ. ಮರಣ ಪರಿಹಾರ ನೀಡಿದರೆ ರೈತರ ಬಡ ಕುಟುಂಬಗಳಿಗೆ ನೆರವಾಗುತ್ತದೆ ಎಂದು ಹಾಲು ಉತ್ಪಾದಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.