ತುರುವೇಕೆರೆ: ತಾಲ್ಲೂಕಿನ ನಾಯಕನಘಟ್ಟದ ಶಂಕರಯ್ಯ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಾಯಕನಘಟ್ಟದ ರವೀಶ್ (43), ಮನು (26) ಮತ್ತು ಸಚಿನ್ (19) ಬಂಧಿತರು. ಇವರನ್ನು ತಿಪಟೂರಿನ ಕುಮಾರ್ ಆಸ್ಪತ್ರೆಯ ಬಳಿ ಪೊಲೀಸರು ಬಂಧಿಸಿದ್ದಾರೆ.

ಶಂಕರಯ್ಯ ಮತ್ತು ರವೀಶ್ ದಾಯಾದಿಗಳಾಗಿದ್ದಾರೆ. ಇಬ್ಬರ ನಡುವೆ ನಿವೇಶನದ ವಿಚಾರವಾಗಿ ಹಲವು ಬಾರಿ ಗಲಾಟೆಯೂ ನಡೆದಿತ್ತು. ಶಂಕರಯ್ಯ ಪೊಲೀಸರಿಗೆ ದೂರು ನೀಡಿದ್ದರು. ಶಂಕರಯ್ಯ ಮೇ 13ರಂದು ತುರುವೇಕೆರೆ ಪಟ್ಟಣದಿಂದ ಕೆಲಸ ಮುಗಿಸಿಕೊಂಡು ಟಿವಿಎಸ್ನಲ್ಲಿ ತೆರಳುತ್ತಿದ್ದಾಗ ಆರೋಪಿಗಳು ಮಲ್ಲಾಘಟ್ಟದ ಕೆರೆ ಏರಿ ಹಿಂಭಾಗ ಅಡ್ಡಗಟ್ಟಿ ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ಸಿಪಿಐ ಲೋಕೇಶ್ ಮತ್ತು ಪಿಎಸ್ಐ ಪ್ರೀತಮ್ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.