ಗುಬ್ಬಿ: ತಾಲ್ಲೂಕಿನ ಹೇಮಾವತಿ ನಾಲೆಗೆ ಬಿದ್ದು ಇಸ್ಲಾಂಪುರ ಗ್ರಾಮದ ಮೊಹಮ್ಮದ್ ನಯೀಮ್ (7) ಹಾಗೂ ಮಿಸ್ಬಾಬಾನು (9) ಮೃತಪಟ್ಟಿದ್ದಾರೆ.
ಗ್ರಾಮದ ಮೂವರು ವಿದ್ಯಾರ್ಥಿಗಳು ಶುಕ್ರವಾರ ಶಾಲೆ ಮುಗಿಸಿ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದ ನಾಲೆಯ ಬಳಿ ಆಟವಾಡಲು ಹೋಗಿದ್ದಾಗ ಆಕಸ್ಮಿವಾಗಿ ಜಾರಿ ಮೂವರು ನೀರಿಗೆ ಬಿದ್ದಿದ್ದಾರೆ. ಮೊಹಮ್ಮದ್ ಬಿಲಾಲ್ (10) ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಿಸ್ಬಾಬಾನು ನೀರಿನಲ್ಲಿ ಕೊಚ್ಚಿಹೋಗಿ ಹೇರೂರಿನ ಬಳಿ ಶವವಾಗಿ ದೊರೆತಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಕ್ಕಳನ್ನು ನೋಡಿದ ಸಮೀಪದ ಇಟ್ಟಿಗೆ ಕಾರ್ಖಾನೆಯ ಕೆಲಸಗಾರ ಆಕಾಶ್ ಕಾರ್ತಿಕ್ ಇಬ್ಬರು ಮಕ್ಕಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಆದರೆ ಅದಾಗಲೇ ನಯೀಮ್ ಮೃತಪಟ್ಟಿದ್ದರು.
ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.