ಶುಕ್ರವಾರ, ಡಿಸೆಂಬರ್ 4, 2020
22 °C

ದೇಗುಲ ಬದಲು ಗ್ರಂಥಾಲಯ ನಿರ್ಮಿಸಿ: ಪ್ರತಾಪ್ ಮದಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ದೇವಾಲಯ ನಿರ್ಮಿಸಿ ಸಾಲಮಾಡಿ ಪರಿಷೆ, ಉತ್ಸವ ಮಾಡುವ ಬದಲು ಗ್ರಂಥಾಲಯಗಳನ್ನು ಸ್ಥಾಪಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರತಾಪ್ ಮದಕರಿ ಸಲಹೆ ಮಾಡಿದರು.

ತಾಲ್ಲೂಕಿನ ಗೂಳೂರು ಹೋಬಳಿ ನಾಯಕನಪಾಳ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಾಲಮಾಡಿ ಹಬ್ಬ ಆಚರಿಸಿ, ಸಾಲ ತೀರಿಸಲು ಇಡೀ ವರ್ಷ ದುಡಿಯಬೇಕು. ಅದರ ಬದಲು, ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಭವಿಷ್ಯದಲ್ಲಿ ಸಮಾಜಕ್ಕೆ ಆಸ್ತಿಯಾಗುತ್ತಾರೆ. ಈ ನಿಟ್ಟಿನಲ್ಲಿ ನಾಯಕ ಸಮುದಾಯ ಆಲೋಚಿಸಬೇಕಾಗಿದೆ’ ಎಂದರು.

ಸಮುದಾಯದ ಮುಖಂಡ ಲಕ್ಷ್ಮಿನಾರಾಯಣ್ ‘ಶಿಕ್ಷಣದಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶಿಕ್ಷಣದ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ’ ಎಂದರು.

ನಿವೃತ್ತ ಅಧಿಕಾರಿ ಜಯಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಾಲ್ಮೀಕಿ ಸಮುದಾಯದ ಮಕ್ಕಳನ್ನು ಮುಖಂಡ ಮಸ್ಕಲ್ ಕೆಂಪಹನುಮಯ್ಯ ಗೌರವಿಸಿದರು. ಹರಿಕಥಾ ದಾಸರಾದ ಎನ್.ಆರ್. ಕೆಂಪರಾಜು, ಕುಪ್ಪೂರು ರಂಗಪ್ಪನಾಯಕ್ ಅವರನ್ನು ಸನ್ಮಾ ನಿಸಲಾಯಿತು. ಗಂಗರಾಜು, ರವಿಪ್ರಸಾದ್, ಲೋಕೇಶ್, ರಾಮಯ್ಯ, ಲಕ್ಷ್ಮಯ್ಯ, ಹನುಮಂತಯ್ಯ, ಶಂಕ್ರಯ್ಯ, ಶ್ರೀನಿವಾಸ್, ನಾರಾಯಣಪ್ಪ, ಲಿಂಗಣ್ಣ, ಪುಟ್ಟಸ್ವಾಮಯ್ಯ, ತಿಮ್ಮರಾಜು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.