ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬೇಳೆ, ಧಾನ್ಯ ದುಬಾರಿ; ಗಗನ ಮುಟ್ಟಿದ ಬೀನ್ಸ್ ಬೆಲೆ

Published 28 ಏಪ್ರಿಲ್ 2024, 5:24 IST
Last Updated 28 ಏಪ್ರಿಲ್ 2024, 5:24 IST
ಅಕ್ಷರ ಗಾತ್ರ

ತುಮಕೂರು: ಬೀನ್ಸ್ ಸೇರಿದಂತೆ ತರಕಾರಿ ಬೆಲೆ ಮತ್ತಷ್ಟು ಏರಿಕೆಯಾಗಿದ್ದು, ಸೊಪ್ಪು ದುಬಾರಿಯಾಗಿದೆ. ಬೇಳೆ ಕಾಳುಗಳು, ಧಾನ್ಯ ದರ ಸಹ ಹೆಚ್ಚಳವಾಗಿದ್ದು, ಕೋಳಿ ಮಾಂಸ, ಮೀನು ಇದೇ ದಾರಿಯಲ್ಲಿ ಸಾಗಿದೆ. ಹಣ್ಣು ಹೊರತುಪಡಿಸಿದರೆ ದಿನನಿತ್ಯ ಬಳಸುವ ಸಾಮಗ್ರಿಗಳು ಜನರಿಗೆ ಹೊರೆಯಾಗಿವೆ.

ಬೀನ್ಸ್ ಗಗನಮುಖಿ: ಹಿಂದಿನ ವಾರ ಬೀನ್ಸ್ ಕೆ.ಜಿ ₹100–120ಕ್ಕೆ ಏರಿಕೆಯಾಗಿದ್ದರೆ, ಈ ವಾರ ಮತ್ತಷ್ಟು ಗಗನಮುಖಿಯಾಗಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹150–160ಕ್ಕೆ ಜಿಗಿದಿದ್ದು, ಚಿಲ್ಲರೆಯಾಗಿ ₹200ರ ವರೆಗೂ ಮಾರಾಟವಾಗುತ್ತಿದೆ. ದಿನದಿಂದ ದಿನಕ್ಕೆ ಬಿಸಿಲಿನ ಝಳ ತೀವ್ರವಾಗುತ್ತಿದ್ದು, ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗಿದೆ. ತಾಪಮಾನ ಹೆಚ್ಚಳದಿಂದ ಬೆಳೆ ಉಳಿಸಿಕೊಳ್ಳುವುದು ಕಷ್ಟಕರವಾಗಿದ್ದು, ಇಳುವರಿ ತೀವ್ರವಾಗಿ ಕುಸಿದಿರುವುದು ಬೆಲೆ ಏರಿಕೆ ಕಾರಣವಾಗಿದೆ. ಏಪ್ರಿಲ್ ಕೊನೆ ಭಾಗಕ್ಕೆ ಕಾಲಿಟ್ಟಿದ್ದರೂ ಮಳೆಯ ಸೂಚನೆ ಇಲ್ಲವಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಮತ್ತಷ್ಟು ದುಬಾರಿಯಾಗಲಿದೆ.

ತಾಪಮಾನ ಏರಿಕೆ, ಮಳೆ ಕೊರತೆಯಿಂದಾಗಿ ಇತರೆ ತರಕಾರಿ ಬೆಳೆಯುವುದು ಕಷ್ಟಕರವಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಬೆಲೆ ಹೆಚ್ಚಳವಾಗಿದೆ. ಈರುಳ್ಳಿ, ಟೊಮೆಟೊ ಹೊರತುಪಡಿಸಿದರೆ ಬಹುತೇಕ ತರಕಾರಿಗಳು ಜನರಿಗೆ ದುಬಾರಿಯಾಗಿವೆ. ಯಾವ ತರಕಾರಿಯೂ ಕಡಿಮೆ ಬೆಲೆಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲಂಗಿ ದರವೇ ಕೆ.ಜಿ ₹40–50ಕ್ಕೆ ಏರಿಕೆ ಕಂಡಿದ್ದು, ಇತರೆ ತರಕಾರಿಗಳ ಬೆಲೆ ಕೇಳುವಂತಿಲ್ಲ. ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಸೌತೆಕಾಯಿ, ನಿಂಬೆಹಣ್ಣು ದರ ಮತ್ತಷ್ಟು ಏರಿಕೆಯಾಗಿದೆ.

ಸೊಪ್ಪು ಏರಿಕೆ: ಕೊತ್ತಂಬರಿ ಸೊಪ್ಪು ಹೊರತುಪಡಿಸಿದರೆ ಇತರೆ ಸೊಪ್ಪಿನ ದರ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಕೆ.ಜಿ ₹70–80, ಮೆಂತ್ಯ ಸೊಪ್ಪು ಕೆ.ಜಿ ₹70–80, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಏರಿಕೆಯಾಗಿದೆ.

ಪಪ್ಪಾಯ ಇಳಿಕೆ: ಪಪ್ಪಾಯ ಹಣ್ಣು ಕೆ.ಜಿಗೆ ₹10 ಕಡಿಮೆಯಾಗಿದ್ದು, ಬೇಸಿಗೆಯಲ್ಲಿ ಪಪ್ಪಾಯ ಸೇವನೆ ಕಡಿಮೆಯಾಗಿರುವುದು ಬೆಲೆ ಇಳಿಕೆಯಾಗುವಂತೆ ಮಾಡಿದೆ. ಉಳಿದ ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹108–110, ಪಾಮಾಯಿಲ್ ಕೆ.ಜಿ ₹91–92, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ ದುಬಾರಿ: ಧಾನ್ಯ, ಬೇಳೆ ಧಾರಣೆ ಮತ್ತೆ ಏರಿಕೆಯತ್ತ ಮುಖಮಾಡಿದೆ. ಬಹುತೇಕ ಬೇಳೆಗಳ ದರ ಕೆ.ಜಿಗೆ ₹5ರ ವರೆಗೂ ಜಿಗಿದಿದ್ದು, ಹುರಿಗಡಲೆ ಒಮ್ಮೆಲೆ ಕೆ.ಜಿಗೆ ₹10 ಹೆಚ್ಚಳ ಕಂಡಿದೆ. ಸಕ್ಕರೆ ಬೆಲೆಯೂ ಏರಿಕೆಯಾಗಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ಕಾಳುಮೆಣಸು ಮತ್ತೆ ದುಬಾರಿಯಾಗಿದ್ದು, ಚಕ್ಕೆ, ಲವಂಗ ಧಾರಣೆ ತುಸು ಹೆಚ್ಚಳವಾಗಿದೆ.

ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹250–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹200–210, ಹುಣಸೆಹಣ್ಣು ₹130–150, ಕಾಳುಮೆಣಸು ಕೆ.ಜಿ ₹640–660, ಜೀರಿಗೆ ಕೆ.ಜಿ ₹300–310, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹85–90, ಚಕ್ಕೆ ಕೆ.ಜಿ ₹250–270, ಲವಂಗ ಕೆ.ಜಿ ₹1,000–1,050, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಬಾದಾಮಿ ಕೆ.ಜಿ ₹640–660, ಗೋಡಂಬಿ ಕೆ.ಜಿ ₹620–700, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಏರಿಕೆ: ಯುಗಾದಿ ಹಬ್ಬದ ನಂತರ ಇಳಿಕೆಯಾಗಿದ್ದ ಕೋಳಿ ಮಾಂಸದ ಬೆಲೆ ಈ ವಾರ ಮತ್ತೆ ಏರಿಕೆಯತ್ತ ಮುಖಮಾಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹240, ಸ್ಕಿನ್‌ಲೆಸ್ ಕೆ.ಜಿ ₹260, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಹೆಚ್ಚಳವಾಗಿದೆ.

ಮೀನು ದುಬಾರಿ: ಸಮುದ್ರ ಮೀನಿನ ಆವಕ ಕಡಿಮೆಯಾಗಿದ್ದು, ಬೆಲೆ ಮತ್ತೂ ಹೆಚ್ಚಳವಾಗಿದೆ. ಬಂಗುಡೆ ಕೆ.ಜಿ ₹310, ಬೊಳಿಂಜರ್ ಕೆ.ಜಿ ₹210, ಕಪ್ಪುಮಾಂಜಿ ಕೆ.ಜಿ ₹850, ಸೀಗಡಿ ಕೆ.ಜಿ ₹480–780, ಏಡಿ ಕೆ.ಜಿ 500ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಹಣ್ಣು (ಬೆಲೆ ಕೆ.ಜಿ ₹)

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT