71,425 ನಲ್ಲಿ ಸಂಪರ್ಕ, 985 ಕಿ.ಮೀ ಪೈಪ್‌ಲೈನ್; ₹301 ಕೋಟಿ ವೆಚ್ಚ
ಮೈಲಾರಿ ಲಿಂಗಪ್ಪ
Published : 4 ಅಕ್ಟೋಬರ್ 2025, 5:23 IST
Last Updated : 4 ಅಕ್ಟೋಬರ್ 2025, 5:23 IST
ಫಾಲೋ ಮಾಡಿ
Comments
ಶಾಂತಿನಗರದ ಮನೆಯೊಂದರ ನಲ್ಲಿ ಮುರಿದಿರುವುದು
ಎಚ್.ಮಲ್ಲಿಕಾರ್ಜುನ
ಕವಿತಾ
ಶಿವಮ್ಮ
ಅರುಣ್
ವಾರ್ಡ್‌ನಲ್ಲಿ ₹10 ಕೋಟಿ ಲೋಪ
ಪ್ರತಿ ವಾರ್ಡ್‌ನಲ್ಲಿ ₹5 ಕೋಟಿಯಿಂದ ₹10 ಕೋಟಿ ಅವ್ಯವಹಾರವಾಗಿದೆ. ಲೋಕಾಯುಕ್ತ ತನಿಖೆ ನಡೆದರೆ ಎಲ್ಲವೂ ಗೊತ್ತಾಗಲಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಮಲ್ಲಿಕಾರ್ಜುನ ಒತ್ತಾಯಿಸಿದರು. ಯಾವುದೇ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಯೋಜನೆಯಡಿ ಅಳವಡಿಸಿದ ಪೈಪ್ ಎರಡೇ ವರ್ಷಕ್ಕೆ ಕಿತ್ತು ಬಂದಿವೆ. ಕಳಪೆ ಸಾಮಗ್ರಿ ಬಳಸಲಾಗಿದೆ. ಅಶೋಕ ನಗರದಲ್ಲಿ ಪ್ರಾರಂಭದಲ್ಲಿ ನೀರು ಸಿಕ್ಕಿದ್ದು ಬಿಟ್ಟರೆ ಮತ್ತೆ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಒಂದೆರಡು ಕಡೆ ಹೊರತುಪಡಿಸಿದರೆ ಉಳಿದೆಡೆ ಯೋಜನೆ ಕೆಲಸ ಸಮರ್ಪಕವಾಗಿ ನಡೆದಿಲ್ಲ ಎಂದರು.
5 ದಿನಕ್ಕೊಮ್ಮೆ ನೀರು
ಶಾಂತಿನಗರ ಭಾಗದಲ್ಲಿ ಐದು ದಿನಕ್ಕೊಮ್ಮೆ ಕೆಲವು ಸಲ ವಾರಕ್ಕೊಮ್ಮೆ ನೀರು ಬರುತ್ತದೆ. ಈ ಭಾಗದ ಮನೆಗಳಲ್ಲಿ ಸಂಪ್ ವ್ಯವಸ್ಥೆ ಇಲ್ಲ. ಹೀಗಾಗಿ ಹೆಚ್ಚುವರಿ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ. ಸ್ಥಳೀಯರು ನಲ್ಲಿಯಲ್ಲಿ ನೀರು ಬರುವ ತನಕ ಕಾಯಬೇಕಾದ ಪರಿಸ್ಥಿತಿ ಇದೆ. ನಿರಂತರ ನೀರು ಸರಬರಾಜು ಮಾಡುವ ಉದ್ದೇಶದಿಂದ ನಲ್ಲಿ ಸಂಪರ್ಕ ಕಲ್ಪಿಸಿ ಎರಡರಿಂದ ಮೂರು ವರ್ಷ ಕಳೆದರೂ ನೀರು ಮಾತ್ರ ಬರುತ್ತಿಲ್ಲ. ನಲ್ಲಿ ಹಾಳಾದ ನಂತರ ಜನರೇ ಸರಿ ಮಾಡಿಸಿಕೊಂಡಿದ್ದಾರೆ. ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ವಾಟರ್‌ಮ್ಯಾನ್‌ಗಳು ನಮ್ಮ ಮಾತು ಕೇಳುವುದಿಲ್ಲ. ಸಮಸ್ಯೆ ಯಾರ ಬಳಿ ಹೇಳಬೇಕು? ಎಂದು ಮಂಜುನಾಥ್ ಪ್ರಶ್ನಿಸಿದರು.
3 ಗಂಟೆ ಪೂರೈಕೆ
ಕೆಲವು ಸಲ ನಾಲ್ಕೈದು ದಿನಕ್ಕೊಮ್ಮೆ ನೀರು ಬರುತ್ತದೆ. ಅದು ಕೂಡ 2ರಿಂದ 3 ಗಂಟೆ ಮಾತ್ರ ನಲ್ಲಿಯಲ್ಲಿ ನೀರು ಇರುತ್ತದೆ. ಇದಾದ ಮೇಲೆ ಯಾರಿಗೆ ಹೇಳಿದರೂ ನೀರು ಮಾತ್ರ ಬರಲ್ಲ. ನೀರಿನ ಆಪರೇಟರ್ ಕರೆ ಸ್ವೀಕರಿಸುವುದಿಲ್ಲ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಗಡೆ ಬರುವುದಿಲ್ಲ. ಕವಿತಾ ಶಾಂತಿನಗರ ** ಕಲುಷಿತ ನೀರು ಕನಿಷ್ಠ ಹಬ್ಬ–ಹರಿದಿನದ ಸಮಯದಲ್ಲಾದರೂ ಸಮರ್ಪಕವಾಗಿ ನೀರು ಕೊಡಬೇಕು. ಅದಕ್ಕೂ ಸ್ಪಂದನೆ ನೀಡದಿದ್ದರೆ ಅಧಿಕಾರಿಗಳು ಇದ್ದು ಏನು ಪ್ರಯೋಜನ. ನೀರು ಶುದ್ಧವಾಗಿ ಇರುವುದಿಲ್ಲ. ತುಂಬಾ ಸಲ ಕಲುಷಿತ ನೀರು ಸರಬರಾಜು ಮಾಡುತ್ತಾರೆ. ಶಿವಮ್ಮ ಶಾಂತಿನಗರ ** ಗುಣಮಟ್ಟ ಪರಿಶೀಲಿಸಿ ನಲ್ಲಿಯಲ್ಲಿ ಬರುವ ನೀರಿನ ಗುಣಮಟ್ಟ ಪರಿಶೀಲಿಸಬೇಕು. ಪೈಪ್ ಮೂಲಕ ನೀರು ಹರಿಸಲಾಗುತ್ತಿದೆ. ಎಲ್ಲಾದರೂ ಪೈಪ್ ಒಡೆದಿದ್ದರೆ ಕಲುಷಿತ ನೀರು ಸೇರಿಕೊಳ್ಳುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಅರುಣ್ ಕೋತಿತೋಪು