ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ಮಂತ್ರಾಕ್ಷತೆ ಕಳಶಕ್ಕೆ ಸ್ವಾಗತ

Published 11 ಡಿಸೆಂಬರ್ 2023, 14:17 IST
Last Updated 11 ಡಿಸೆಂಬರ್ 2023, 14:17 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪಟ್ಟಣಕ್ಕೆ ಸೋಮವಾರ ಆಗಮಿಸಿದ ಆಯೋಧ್ಯೆಗೆ ಅರ್ಪಿತ ಮಂತ್ರಾಕ್ಷತೆ ಕಳಶಕ್ಕೆ ವಿಜೃಂಭಣೆಯ ಸ್ವಾಗತ ನೀಡಲಾಯಿತು.

ಪಟ್ಟಣದ ಪಂಚಮುಖಿ ಆಂಜನೇಯ ದೇವಾಲಯ ಬಳಿಗೆ ಬೆಳಿಗ್ಗೆ 11ಕ್ಕೆ ಆಗಮಿಸಿದ ಮಂತ್ರಾಕ್ಷತೆ ಕಳಶವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಎತ್ತಿನಗಾಡಿಯಲ್ಲಿ ಮಂತ್ರಾಕ್ಷತೆ ಕಳಶವಿರಿಸಿ ಪೂಜೆ ಸಲ್ಲಿಸಲಾಯಿತು.

ಮಂಗಳವಾದ್ಯ, ಸೋಮನ ಕುಣಿತ, ಗಂಗೆಯ ಕಳಶಹೊತ್ತ ಕುವರಿಯರ ತಂಡ, ಶ್ರೀರಾಮ ಹಾಗೂ ಹನುಮ ವೇಶಧಾರಿಗಳ ತಂಡದೊಂದಿಗೆ ಶೋಭಾಯಾತ್ರೆ ನೆಹರೂ ವೃತ್ತದಿಂದ ಖಾಸಗಿ ಬಸ್‍ನಿಲ್ದಾಣ, ಅರಳೆಪೇಟೆ ಮೂಲಕ ಹಳೆಯೂರು ಆಂಜನೇಯ ದೇವಾಲಯದವರೆಗೆ ಸಾಗಿತು. ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕಾಗಿ ಕಳಶವನ್ನಿರಿಸಲಾಯಿತು.

ರಾಕೇಶ್‍ಅಣೆಕಟ್ಟೆ, ಹರ್ಷ, ಸುಧೀಂದ್ರ, ಎಂ. ಬನಶಂಕರಯ್ಯ, ಲಕ್ಷ್ಮಿಕಾಂತ್, ವೇದಮೂರ್ತಿ, ಶ್ರೀನಿವಾಸಮೂರ್ತಿ, ಮಿಲಿಟರಿ ಶಿವಣ್ಣ, ಮೇರುನಾಥ್, ಹುಳಿಯಾರಿನ ಬಸವಯ್ಯ, ಶ್ರೀಧರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT