ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಚಿಕಿತ್ಸೆ ಬಳಿಕ 3 ಮಹಿಳೆಯರ ಸಾವು; ಮೃತರ ಕುಟುಂಬಗಳಿಗೆ ಶೀಘ್ರ ಪರಿಹಾರ

Published 27 ಫೆಬ್ರುವರಿ 2024, 14:28 IST
Last Updated 27 ಫೆಬ್ರುವರಿ 2024, 14:28 IST
ಅಕ್ಷರ ಗಾತ್ರ

‌ಪಾವಗಡ: ಮೂರು ಮಂದಿ ಮಹಿಳೆಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಎಚ್‌ಎಂ ನಿರ್ದೇಶಕಿ ಪುಷ್ಪಲತಾ ತಂಡ ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಂಡದ ಸದಸ್ಯರು ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಿತು.

ಎನ್ ಎಚ್ ಎಂ ಯೋಜನಾ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಸರ್ಕಾರ ಶೀಘ್ರ ಪರಿಹಾರ ಘೋಷಿಸಲಿದೆ. ಈಗಾಗಲೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಕ್ರಮ ಆಗಿದೆ. ರಾಜ್ಯದ ಹಂತದ ಅಧಿಕಾರಿಗಳು ವರದಿ ಪಡೆದು ಕ್ರಮ ತೆಗೆದುಕೊಳ್ಳಲಿದ್ದಾರೆ. 10 ದಿನಗಳೊಳಗಾಗಿ ಪ್ರಕರಣದ ತನಿಖೆ ನಡೆಸುವ ಸಲುವಾಗಿ ತಜ್ಞರ ಸಮಿತಿ ರಚನೆಯಾಗಲಿದೆ ಎಂದರು.

ವೈದ್ಯರು ಖಾಸಗಿ ಮಳಿಗೆಗಳಿಂದ ಔಷಧಿ ತರುವಂತೆ ರೋಗಿಗಳಿಗೆ ತಿಳಿಸಬಾರದು ಎಂದು ಸೂಚಿಸಲಾಗಿದೆ. ಬಾಣಂತಿ, ಮಗುವಿಗೆ ತುರ್ತು ವಾಹನದ ಸೇವೆ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ವೈದ್ಯರು, ಸಿಬ್ಬಂದಿಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದರು.

ತುರ್ತು ವಾಹನಗಳನ್ನು ಬೆಂಗಳೂರು, ತುಮಕೂರಿಗೆ ಕಳುಹಿಸಲು ಹಣ ಪಡೆಯಲಾಗುತ್ತಿದೆ. ತಾಯಿ ಮಗು ತುರ್ತು ವಾಹನವನ್ನು ಪ್ರೀಪೇಯ್ಡ್ ಬಾಡಿಗೆ ವಾಹನದಂತೆ ಬಳಸಲಾಗುತ್ತಿದೆ. ವಾಹನ ಹತ್ತುವ ಮುನ್ನ ಹಣ ನೀಡಿದರೆ ಮಾತ್ರ ತಾಯಿ ಮಗುವನ್ನು ಮನೆಗೆ ಬಿಟ್ಟು ಬರಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಯೋಜನಾ ನಿರ್ದೇಶಕರು, ತಾಯಿ ಮಗುವನ್ನು ತುರ್ತು ವಾಹನದಲ್ಲಿ ಕರೆದೊಯ್ಯಲು ಹಣ ಪಡೆಯುವಂತಿಲ್ಲ. ಆದರೆ ತುಮಕೂರು, ಬೆಂಗಳೂರಿಗೆ ರೋಗಿಯನ್ನು ಕರೆದೊಯ್ಯಲು ಕಿ.ಮೀಗೆ ಇಂತಿಷ್ಟು ಎಂದು ಇಲಾಖೆ ನಿಗದಿಪಡಿಸಿದ ಮೊತ್ತ ಪಡೆಯಬಹುದು. ಆದರೆ, ಪಡೆದ ಹಣಕ್ಕೆ ರಶೀದಿ ನೀಡಬೇಕು. ಬಡ ಜನತೆಗೆ ಉಚಿತವಾಗಿ ತುರ್ತು ವಾಹನ ಕಳುಹಿಸಿಕೊಡುವ ನಿರ್ಧಾರವನ್ನು ವೈದ್ಯಾಧಿಕಾರಿ ತೆಗೆದುಕೊಳ್ಳಬಹುದು ಎಂದರು.

ಉಪ ನಿರ್ದೇಶಕಿ ಚಂದ್ರಿಕ, ಆರ್. ಸಿ. ಎಚ್. ಮೋಹನ್, ಡಿ. ಪಿ. ಎಂ ಯಶಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT