ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿತ್ತು. ಬೆಳೆ ಆರಂಭದಲ್ಲಿ ಚೆನ್ನಾಗಿತ್ತು. ಆದರೆ ಕಳೆದ ಮೂರ್ನಾಲ್ಕು ದಿನದಲ್ಲಿ ಕೀಟ ಬಾಧೆ ಕಾಣಿಸಿಕೊಂಡಿದೆ. ಜೋಳದ ಗರಿಯನ್ನು ಸೀಳಿಕೊಂಡು ಹುಳಗಳು ತಿನ್ನುತ್ತಿವೆ. ಕೀಟ ಬಿದ್ದ ನಾಲ್ಕೈದು ದಿನದಲ್ಲಿ ಗಿಡವನ್ನು ಕೀಟಗಳು ಸಂಪೂರ್ಣ ತಿಂದು ಹಾಕುತ್ತಿವೆ. ನಾಗರಾಜು ರೈತ ರಾತ್ರೋರಾತ್ರಿ ಪೈರು ನಾಶ ಮಳೆಯಾಶ್ರಿತ ಪ್ರದೇಶದಲ್ಲಿ ನಾಲ್ಕು ಎಕರೆ ಭೂಮಿಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದೇನೆ. ಬಿತ್ತನೆಯಾಗಿ 14 ದಿನದಲ್ಲೇ ಸಣ್ಣ ಹಸಿರು ಬಣ್ಣದ ಹುಳುಗಳು ಬೆಳೆಯನ್ನು ಆವರಿಸಿ ತಿನ್ನುತ್ತಿವೆ. ರಾತ್ರೋರಾತ್ರಿ ಒಂದೆರಡು ಅಡಿ ಬೆಳೆದಿರುವ ಪೈರು ನಾಶವಾಗುತ್ತಿದೆ. ಇದು ರೈತರಲ್ಲಿ ಆತಂಕ ಉಂಟು ಮಾಡಿದೆ. ಎ.ಮಂಜುನಾಥ ರೈತ ಮಾವತ್ತೂರು
ಕೀಟನಾಶಕ ದಾಸ್ತಾನು
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕೋಳಾಲ ಹೋಬಳಿಯ ಸ್ವಲ್ಪ ಭಾಗದಲ್ಲಿ ಲದ್ದಿ ಹುಳ ಕೀಟ ಬಾಧೆ ಕಾಣಿಸಿಕೊಂಡಿದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಸಕಾಲದಲ್ಲಿ ಕ್ರಮ ಕೈಗೊಂಡಲ್ಲಿ ಇದನ್ನು ನಿಯಂತ್ರಿಸಬಹುದು. ರೈತ ಸಂಪರ್ಕ ಕೇಂದ್ರದಲ್ಲಿ ಕೀಟನಾಶಕ ದಾಸ್ತಾನು ಇರಿಸಲಾಗಿದೆ. 15 ಲೀಟರ್ ನೀರಿಗೆ 6 ಗ್ರಾಂ ಕೀಟ ನಾಶಕ ಬೆರೆಸಿ ಅದನ್ನು ಬೆಳೆ ಮೇಲೆ ಸಿಂಪಡಿಸಬೇಕು. ಈ ಕೀಟ ಹಗಲಿನಲ್ಲಿ ಹೊರ ಬರುವುದಿಲ್ಲ. ರಾತ್ರಿ ಬೆಳೆ ಮೇಲೆ ಆಕ್ರಮಣ ಮಾಡುವ ಕಾರಣಕ್ಕೆ ಕೀಟ ನಾಶಕವನ್ನು ಸಂಜೆ 4.30 ನಂತರ ಸಿಂಪಡಿಸಿದರೆ ಕೀಟ ಸಂಪೂರ್ಣ ನಾಶವಾಗುತ್ತದೆ. ಕೀಟ ನಾಶಕ ಸಿಂಪಡಣೆ ನಂತರ ಜಾನುವಾರುಗಳು ಬೆಳೆಗಳ ಕಡೆ ಹೋಗದಂತೆ ಎಚ್ಚರ ವಹಿಸಬೇಕು. ಎಂ.ಆರ್.ರುದ್ರಪ್ಪ ಸಹಾಯಕ ಕೃಷಿ ಅಧಿಕಾರಿ