ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಕೋವಿಡ್‌ಗೆ ಮತ್ತೊಂದು ಬಲಿ; 11 ಮಂದಿಗೆ ಸೋಂಕು

ಮುಂಬೈನಿಂದ ಬಂದಿದ್ದ ಸೋಂಕಿತ ವ್ಯಕ್ತಿ ತೆಕ್ಕಟ್ಟೆಯಲ್ಲಿ ಸಾವು: ಸ್ಥಳೀಯರಲ್ಲಿ ಆತಂಕ
Last Updated 19 ಜೂನ್ 2020, 15:00 IST
ಅಕ್ಷರ ಗಾತ್ರ

ಉಡುಪಿ:ಶುಕ್ರವಾರ ಜಿಲ್ಲೆಯಲ್ಲಿ 11 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 6 ಪುರುಷರು, ಮೂವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ.

ಸೋಂಕಿನ ಮೂಲ:ಸೋಂಕಿತರಲ್ಲಿ ನಾಲ್ವರಿಗೆ ಮಹಾರಾಷ್ಟ್ರ ಸಂಪರ್ಕ, ಇಬ್ಬರಿಗೆ ತಮಿಳುನಾಡು ಸಂಪರ್ಕವಿದೆ. ಪಿ–7024 ಸೋಂಕಿತನ ಸಂಪರ್ಕಕ್ಕೆ ಬಂದಿದ್ದ ಮೂವರಿಗೆ ಹಾಗೂ ಪಿ–7291 ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸ್ಥಳೀಯವಾಗಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.

87 ಮಂದಿಯ ಮಾದರಿ ಸಂಗ್ರಹ:ಶಂಕಿತ ಸೋಂಕಿನ‌ ಲಕ್ಷಣ ಹೊಂದಿರುವ, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಾಗೂ ಕೋವಿಡ್‌ ಹಾಟ್‌ಸ್ಟಾಟ್‌ಗಳಿಂದ ಬಂದ 87 ಮಂದಿಯ ಗಂಟಲ ದ್ರವದ ಮಾದರಿಯನ್ನು ಶುಕ್ರವಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 231 ವರದಿಗಳು ಬರುವುದು ಬಾಕಿ ಇದೆ.10 ಮಂದಿಗೆ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

950 ಮಂದಿ ಗುಣಮುಖ:ಜಿಲ್ಲೆಯಲ್ಲಿ ಸೋಂಕಿನಿಂದ 950 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 99 ಸಕ್ರಿಯ ಪ್ರಕರಣಗಳು ಮಾತ್ರ ಬಾಕಿ ಇವೆ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,050ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಕಲಬುರ್ಗಿ (1,126) ಹೊರತುಪಡಿಸಿದರೆ ಅತಿ ಹೆಚ್ಚು ಪ್ರಕರಣಗಳಿರುವುದು ಉಡುಪಿಯಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT