ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಷಯ್ ಮಚ್ಚೀಂದ್ರ ಉಡುಪಿ ನೂತನ ಎಸ್‌ಪಿ

Published : 17 ಆಗಸ್ಟ್ 2022, 4:57 IST
ಫಾಲೋ ಮಾಡಿ
Comments

ಉಡುಪಿ: ಉಡುಪಿ ಎಸ್‌ಪಿ ಎನ್‌.ವಿಷ್ಣುವರ್ಧನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನಕ್ಕೆ ಅಕ್ಷಯ್ ಮಚ್ಚೀಂದ್ರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಎನ್‌.ವಿಷ್ಣುವರ್ಧನ್ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಯ ಎಸ್‌ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

ಅಕ್ಷಯ್ ಮಚ್ಚೀಂದ್ರ 2015ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದು ಚಿಕ್ಕಮಗಳೂರಿನಲ್ಲಿ ಎಸ್‌ಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಎಸ್‌ಪಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

2020, ಜ.1ರಂದು ಅಕ್ಷಯ್‌ ಮಚ್ಚೀಂದ್ರ ಅವರನ್ನು ಉಡುಪಿ ಎಸ್‌ಪಿ ಆಗಿ ನೇಮಿಸಲಾಗಿತ್ತು. ಅಧಿಕಾರ ಸ್ವೀಕರಿಸುವ ಕೆಲವೇ ಮುನ್ನವೇ ದಿಢೀರ್ ವರ್ಗಾವಣೆ ಆದೇಶವನ್ನು ಮಾರ್ಪಾಡುಗೊಳಿಸಿ ಅವರ ಸ್ಥಾನಕ್ಕೆ ಎನ್‌.ವಿಷ್ಣುವರ್ಧನ್‌ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಮತ್ತೆ ಅಕ್ಷಯ್ ಉಡುಪಿ ಎಸ್‌ಪಿ ಆಗಿ ನೇಮಕವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT