ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣು ತರಕಾರಿ, ದಿನಸಿ ವರ್ತಕರ ಸಂಘ ರಚನೆ

Last Updated 19 ನವೆಂಬರ್ 2022, 14:28 IST
ಅಕ್ಷರ ಗಾತ್ರ

ಉಡುಪಿ: ಆದಿ ಉಡುಪಿಯ ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಹಿತ ಕಾಯುವ ದೃಷ್ಟಿಯಿಂದ ‘ಹಣ್ಣು ತರಕಾರಿ ಮತ್ತು ದಿನಸಿ ವರ್ತಕರ ಸಂಘ’ ರಚಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಕೆಎಸ್‌ಎಂ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದ ಅಧ್ಯಕ್ಷರಾಗಿ ಸತೀಶ್ ನಾಯಕ್ ಕೆಪಿಎನ್‌, ಕೋಶಾಧಿಕಾರಿಯಾಗಿ ಗಣೇಶ್‌ ಕಾಮತ್ ಕೆಎಂ, ಉಪಾಧ್ಯಕ್ಷರಾಗಿ ಸಮಿ ಉಲ್ಲ ಎಸ್‌ಎಂಟಿ, ವಿಠಲ್ ಪೈ, ಸಾಲಿಗ್ರಾಮ ವಿಪಿಎಸ್‌, ವಾಸುದೇವ್ ಪೈ ಎಸ್‌ವಿಪಿ, ಎ.ಎಂ.ಬಶೀರ್‌ ಎಎಂಬಿ, ವಿರೂಪಾಕ್ಷ ವಿಪಿ, ಜೊತೆ ಕಾರ್ಯದರ್ಶಿಗಳಾಗಿ ಪುರುಷೋತ್ತಮ ಪೈ ಎಸ್‌ಪಿಪಿ, ಭಾಸ್ಕರ್ ಸಿವಿಕೆ ಹಾಗೂ ವಿರೂಪಾಕ್ಷ ವಿಪಿ,ಸಂಘಟನಾ ಕಾರ್ಯದರ್ಶಿಯಾಗಿ ಅಚ್ಯುತ ಪೈ ಸಾಲಿಗ್ರಾಮ ಎಸ್‌ಕೆಪಿ ಅವರನ್ನು ಆಯ್ಕೆ ಮಾಡಲಾಗಿದೆ.

ಸದಸ್ಯರಾಗಿ ದೇವು ಡಿಬಿಬಿ, ರುದ್ರೇಶ್ ಆರ್‌ಬಿ, ಶಾಂತಾ ಎಸ್‌ಎಂಎಚ್‌, ರತ್ನಾಕರ ಹಾವಂಜೆ, ಪ್ರಕಾಶ್ ಸಜ್ಜನ್ ಎಸ್‌ಆರ್‌ಎಸ್‌, ಮಲ್ಲಿಕಾರ್ಜುನ ಎಂಕೆ, ರಾಜಾ ಎಬಿ, ನಿತ್ಯಾನಂದ್ ಕೆಎನ್‌, ಆಸಿಫ್ ವೈಎಂ, ಸುಭಾಷಿತ್ ಕುಮಾರ್, ಸತ್ಯನಾರಾಯಣ್‌, ರಾಮು ಬಿಎಸ್‌, ಪ್ರಭುಗೌಡ, ಶರತ್ ಎಸ್‌ಎಂಪಿ, ಸೋಮು ಎಸ್‌ಎಡಿ, ದಿನೇಶ್ ಶೆಟ್ಟಿ ಎಂಎಸ್‌ಎಸ್‌, ಸಿದ್ದನಗೌಡ ಎಸ್‌ಪಿಎಚ್‌ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಶಾಸಕ ಕೆ.ರಘುಪತಿ ಭಟ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮನ್ಸೂರ್ ತಿಳಿಸಿದರು.

ವರ್ತಕರಿಗೆ ಸಮಸ್ಯೆಯಾಗದಂತೆ, ಮಾರುಕಟ್ಟೆಯಲ್ಲಿ ಶಿಸ್ತು ಪಾಲನೆಗೆ, ಸ್ವಚ್ಛತೆ ಕಾಪಾಡಲು ಸಂಘ ಆದ್ಯತೆ ನೀಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮತ್‌, ಸಮಿ ಉಲ್ಲ, ರತ್ನಾಕರ ಹಾವಂಜೆ, ಅಚ್ಯುತ್ ಪೈ ಸಾಲಿಗ್ರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT