ಬುಧವಾರ, ಮಾರ್ಚ್ 29, 2023
23 °C

ಹೆಬ್ರಿಗೆ ಅರುಣಾಚಲ ಪ್ರದೇಶ ಪಂಚಾಯಿತಿ ರಾಜ್‌ ತಂಡ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ಹೆಬ್ರಿ ಗ್ರಾಮ ಪಂಚಾಯಿತಿಗೆ ಅರುಣಾಚಲ ಪ್ರದೇಶದ ಪಂಚಾಯತಿ ರಾಜ್ ತ್ರಿಸ್ತರ ವ್ಯವಸ್ಥೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿಯೋಗ ಬುಧವಾರ ಭೇಟಿ ನೀಡಿ ಸ್ವಚ್ಛತೆ ಸಂಕೀರ್ಣ, ನರ್ಸರಿ ತೋಟ ವೀಕ್ಷಣೆ ಮತ್ತು ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಮಾಹಿತಿಯನ್ನು ಪಡೆದುಕೊಂಡರು. ಅರುಣಾಚಲ ಪ್ರದೇಶದಲ್ಲಿ ಅನುಸರಣೆ, ಅನುಕರಣೆ ಮಾಡಲು ಹೆಬ್ರಿ ಪಂಚಾಯಿತಿಯಿಂದ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಪಡೆದರು.

ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಅವರ ನೇತೃತ್ವದಲ್ಲಿ ತಂಡವನ್ನು ಸ್ವಾಗತಿಸಿ ಮಾಹಿತಿ ವಿನಿಮಯ ನಡೆಸಲಾಯಿತು. ಹೆಬ್ರಿ ಗ್ರಾಮ ಪಂಚಾಯಿತಿಯ ಪ್ರಗತಿಯ ಬಗ್ಗೆ ತಂಡ ಮೆಚ್ಚುಗೆ ವ್ಯಕ್ತಪಡಿಸಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಶಿಧರ ಕೆ.ಜಿ., ಮೈಸೂರು ಪಂಚಾಯತ್ ರಾಜ್ ಸಂಸ್ಥೆಯ ಎಸ್ಎಚ್ ಪ್ರಕಾಶ್ ಜಿ., ಮಲ್ಲಿಕಾರ್ಜುನ ಸ್ವಾಮಿ, ಪಂಚಾಯತ್ ರಾಜ್ ವಿಭಾಗದ ಎಂಜಿನಿಯರ್ ಸುರೇಂದ್ರನಾಥ್, ಹೆಬ್ರಿ ಪಿಡಿಒ ಸದಾಶಿವ ಸೇರ್ವೆಗಾರ್, ಸದಸ್ಯರಾದ ಸುಧಾಕರ್ ಹೆಗ್ಡೆ, ಜನಾರ್ದನ ಎಚ್., ಎಚ್. ಬಿ. ಸುರೇಶ್, ಕೃಷ್ಣ ನಾಯ್ಕ್, ತಾರನಾಥ ಬಂಗೇರ, ಪಂಚಾಯಿತಿ ಸಿಬ್ಬಂದಿ ಮತ್ತು ಸ್ವಚ್ಛ ಸಂಕೀರ್ಣದ ಸಿಬ್ಬಂದಿ ಇದ್ದರು. ನಿಯೋಗವನ್ನು ಸಾಂಪ್ರದಾಯಿಕವಾಗಿ ತಿಲಕವಿಟ್ಟು ಪುಷ್ಪ ಸಿಂಚನ ಮತ್ತು ಪುಷ್ಪ ನೀಡುವುದರ ಮೂಲಕ ಸ್ವಾಗತಿಸಿ ಸಾಂಪ್ರಾದಾಯಿಕ ತುಳುನಾಡಿನ ಮುಟ್ಟಾಳೆ ತೊಡಿಸಿ ಗೌರವಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು