ಮಂಗಳವಾರ, ಅಕ್ಟೋಬರ್ 20, 2020
23 °C

ದೋಣಿ ಮುಳುಗಡೆ: ಓರ್ವ ನಾಪತ್ತೆ, ಐವರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ (ಉಡುಪಿ): ಇಲ್ಲಿನ ಹೆಜಮಾಡಿಯಿಂದ ಭಾನುವಾರ ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ್ದು, ಓರ್ವ ಮೀನುಗಾರ ನಾಪತ್ತೆಯಾಗಿದ್ದು, ಐವರನ್ನು ರಕ್ಷಣೆ ಮಾಡಲಾಗಿದೆ.

ಹೆಜಮಾಡಿಯ ಅಳಿವೆ ಬಳಿ ದುರ್ಘಟನೆ ನಡೆದಿದ್ದು, ಹೆಜಮಾಡಿ ಕೋಡಿಯ ಸುಖೇಶ್ (25) ನಾಪತ್ತೆಯಾದ ಮೀನುಗಾರರ. ಏಕನಾಥ ಕರ್ಕೇರ, ನಾಗೇಶ್, ಪಾಂಡುರಂಗ, ನೀರಜ್, ರಾಜೇಶ್ ಅವರನ್ನು ರಕ್ಷಣೆ ಮಾಡಲಾಗಿದೆ.

ಕೋಡಿಯ ಏಕನಾಥ ಕರ್ಕೇರ ಅವರ ಯಾಂತ್ರಿಕೃತ ದೋಣಿ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದಾಗ ಸಮುದ್ರದ ಅಲೆಗಳ ಒತ್ತಡಕ್ಕೆ ಸಿಲುಕಿ ಮುಳುಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು