ಕೋಟ(ಬ್ರಹ್ಮಾವರ): ಅಕಾಲಿಕ ಮಳೆಯಿಂದ ಕೋಟ ಹೋಬಳಿ ಭಾಗದ ಕಲ್ಲಂಗಡಿ ಬೆಳೆ ಸಂಪೂರ್ಣ ಹಾನಿಗೊಂಡಿರುವ ಪ್ರದೇಶಗಳಿಗೆ, ಕುಂದಾಪುರ ಎ.ಸಿ ರಶ್ಮಿ ಮಂಗಳವಾರ ಭೇಟಿ ನೀಡಿ, ರೈತ ಸಮುದಾಯಕ್ಕೆ ಸಾಂತ್ವನ ಹೇಳಿದರು.

ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಎಸ್ ಹೆಗ್ಡೆ ಸಹಿತ ಅಧಿಕಾರಿಗಳ ತಂಡ ಕಲ್ಲಂಗಡಿ ಬೆಳೆದ ಗದ್ದೆಗಿಳಿದು, ಕೋಟದ ಹರ್ತಟ್ಟಿನ ಕೃಷಿಕ ಸಿದ್ಧ ದೇವಾಡಿಗ ಅವರಿಂದ ಮಾಹಿತಿ ಪಡೆದರು.

ಈ ಸಂದರ್ಭ ಮಾತನಾಡಿದ ಅವರು, ಹಾನಿಗೊಂಡ ಬಗ್ಗೆ ಸಂಬಂಧಿಸಿದ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಮಾಹಿತಿ ಕಲೆಹಾಕಲು ಸೂಚಿಸಿದ್ದೇನೆ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುತ್ತಾರೆ ಎಂದರು.

ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ ಹಾಗೂ ಗ್ರಾಮ ಲೆಕ್ಕಿಗ ಚಲುವರಾಜು, ತಾಲ್ಲೂಕು ಜನಾಧಿಕಾರಿ ಸಂದೇಶ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.