ಸಾಲಿಗ್ರಾಮ(ಬ್ರಹ್ಮಾವರ): ‘ಜಗತ್ತಿನ ಮೊದಲ ಎಂಜಿನಿಯರ್ ವಿಶ್ವಕರ್ಮ. ಇಂದಿನ ಚಂದ್ರಯಾನದಂತಹ ಸಾಧನೆಗೆ ದೇವಶಿಲ್ಪಿ ವಿಶ್ವಕರ್ಮ ಪರಬ್ರಹ್ಮನ ಪ್ರೇರಣೆಯೂ ಇದೆ. ದ್ವಾರಕಾ ನಗರ, ಪುಷ್ಪಕ ವಿಮಾನಗಳ ಬಗ್ಗೆ ಪ್ರಾಚೀನ ಯುಗದಲ್ಲಿ ಇಂತಹ ಸಾಧನೆಗಳನ್ನು ಮಾಡಿರುವ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ’ ಎಂದು ಬ್ರಹ್ಮಾವರದ ಪ್ರಭಾರ ತಹಶೀಲ್ದಾರ್ ಶೋಭಾಲಕ್ಷ್ಮೀ ಹೇಳಿದರು.
ಕೋಟ ವಿರಾಡ್ವಿಶ್ವಬ್ರಾಹಣ ಸಮಾಜೋದ್ಧಾರಕ ಸಂಘ, ವಿಶ್ವಕರ್ಮ ಕಲಾವೃಂದ, ವಿಶ್ವಜ್ಯೋತಿ ಮಹಿಳಾ ಬಳಗದ ವತಿಯಿಂದ ಸಾಲಿಗ್ರಾಮದ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ದಂಪತಿಗಳ ಸಂಕಲ್ಪ ಪೂಜೆಯೊಂದಿಗೆ ವಿಶ್ವಕರ್ಮ ಯಜ್ಞ ಮಹೋತ್ಸವ ನಡೆಯಿತು.
ತಹಶೀಲ್ದಾರ್ ಶೋಭಾಲಕ್ಷ್ಮೀ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ಜನಾರ್ದನ್ ಆಚಾರ್ಯ ಚೇಂಪಿ, ಐರೋಡಿ ಕೇಶವ ಆಚಾರ್ಯ, ರಮೇಶ್ ಆಚಾರ್ಯ ಚೇಂಪಿ, ವೆಂಕಟೇಶ್ ಆಚಾರ್ಯ, ಸವಿತಾ ಚಂದ್ರ ಶೇಖರ ಆಚಾರ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.