ಬಾರ್ಕೂರು (ಬ್ರಹ್ಮಾವರ): ಧರ್ಮ ಅಂದರೆ ಒಳ್ಳೆಯ ನಡೆ. ಬೆಳಕು, ಚೇತನ, ಪ್ರೀತಿ ಎನ್ನುವುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಯಾವುದೇ ಧರ್ಮವನ್ನು ಕೀಳಾಗಿ ಕಾಣಲು ಯಾವ ಧರ್ಮದಲ್ಲೂ ಹೇಳಿಲ್ಲ. ಧರ್ಮದ ಗೊಂದಲಗಳನ್ನು ಸೃಷ್ಟಿ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರಲ್ಲೂ ಸದ್ಧರ್ಮದ ನಡೆ ಮುಖ್ಯ ಎಂದು ಚಿತ್ರದುರ್ಗದ ಆದಿ ಜಾಂಬವ ಸಂಸ್ಥಾನಮಠ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಬಾರ್ಕೂರು ಕಚ್ಚೂರು ಮಾಲ್ತಿದೇವಿ ದೇವಸ್ಥಾನದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಭಾನುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಜಾತ್ರೆ ಅಂದರೆ ಸಂಭ್ರಮ, ಸಡಗರ, ಅದು ಭಾವೈಕ್ಯತೆಯ ವೇದಿಕೆ. ಸಮುದಾಯದ ನಾಯಕನಾದವನಿಗೆ ದೂರದೃಷ್ಟಿ ಹಾಗೂ ಒಟ್ಟಿಗೆ ಕರೆದುಕೊಂಡು ಹೋಗುವ ಗುಣ ಇದ್ದಾಗ ಆ ಸಮುದಾಯ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಶ್ರೀಗಳು, ಸಮಾಜದ ನಾಯಕರು ಎಲ್ಲ ಸಮಾಜವನ್ನು ಜೋಡಿಸುವ ಕೆಲಸ ಮಾಡಬೇಕು’ ಎಂದರು.

ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಶುಭ ಹಾರೈಸಿದರು.

ಕಚ್ಚೂರು ಕ್ಷೇತ್ರದ ಮಾಜಿ ಅಧ್ಯಕ್ಷ ಪಿ.ಬಾಬು ಮಲ್ಲಾರ್, ಉಡುಪಿ ಜಿಲ್ಲಾ ಮುಂಡಾಲ ಮಹಾಸಭಾ ರಿ.ಇದರ ಅಧ್ಯಕ್ಷ ಶಂಕರ ಪದಕಣ್ಣಾಯ, ಕಟಪಾಡಿ ಪೇಟೆಬೆಟ್ಟು ಕೊರಗಜ್ಜ ಕ್ಷೇತ್ರದ ಗುರಿಕಾರ ಹರೀಶ್ಚಂದ್ರ, ಉದ್ಯಮಿ ಹರೀಶ ಜೆ. ಕೊಲಕಾಡಿ, ವೈ.ಜಿ. ಸುರೇಶ, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ ರಘುವೀರ ಬಾಬುಗುಡ್ಡ ಮಂಗಳೂರು, ಹೊಸನಗರ ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಚಂದ್ರಪ್ಪ ಎಚ್., ಶಿವಮೊಗ್ಗ ಡಿ.ವಿ.ಎಸ್. ಸಂಯುಕ್ತ ಪ.ಪೂ. ಕಾಲೇಜಿನ ಉಪಪ್ರಾಂಶುಪಾಲ ಲಕ್ಷ್ಮಣ ಪಿ., ಗಂಗೊಳ್ಳಿ ಅಂಬೇಡ್ಕರ್ ಯುವಕ ಮಂಡಲ ಸ್ಥಾಪಕಾಧ್ಯಕ್ಷ ಭಾಸ್ಕರ ಎಚ್.ಗಂಗೊಳ್ಳಿ, ಮುಂಡಾಳ ಯುವ ವೇದಿಕೆ ಅಧ್ಯಕ್ಷ ಮಂಜುನಾಥ ಕರ್ಕೇರ, ಭಾಸ್ಕರ ಗುರಿಕಾರ ನಿಟ್ಟೂರು, ಚನ್ನಕೇಶವ ಎಂ.ಜಿ. ಮೂಡಿಗೇರಿ, ಮಂಜುನಾಥ ಕೆ. ಎಲೆಮಡಲು ಶೃಂಗೇರಿ., ಎ. ಚಂದ್ರ ಕುಮಾರ್, ನಿರಂಜನ ಕುಮಾರ್ ಗುರಿಕಾರ ಸುರತ್ಕಲ್, ದಿನೇಶ ಗುರಿಕಾರ ಮೂಡು ಪಲಿಮಾರು, ಹರೀಶ್ ಗುರಿಕಾರ ಬಂಟಕಲ್ಲು, ಉತ್ಸವ ಸಮಿತಿ ಅಧ್ಯಕ್ಷ ರವಿರಾಜ ಹೆಜಮಾಡಿ ಇದ್ದರು.

ಇದೇ ಸಂದರ್ಭ ಕ್ಷೇತ್ರದ ವತಿಯಿಂದ ಸಾಹಿತಿ ಮೋಹನ್ ಕಣ್ಣೂರು ಅವರಿಗೆ ಸೇವಾ ಪುರಸ್ಕಾರ ಮತ್ತು ಪ್ರಸಂಗಕರ್ತ, ಹಿರಿಯ ಸಾಹಿತಿ ಕೆ.ಕೆ.ಕಾಳವರ್ಕರ್ ಅವರಿಗೆ ಕಚ್ಚೂರು ಸಾಹಿತ್ಯ ಸೇವಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಕ್ಷೇತ್ರದ ಧರ್ಮದರ್ಶಿ ಗೋಕುಲದಾಸ್ ಸ್ವಾಗತಿಸಿದರು. ಸಂತೋಷ್ ಪಡುಬಿದ್ರೆ ವಂದಿಸಿದರು. ಕಾರ್ಯದರ್ಶಿ ಪ್ರೇಮಾನಂದ ಬಾರ್ಕೂರು ನಿರೂಪಿಸಿದರು.

ಸರ್ಕಾರದಿಂದ ಅನುದಾನ ದೊರಕಿಸಿಕೊಡಿ

ಕಚ್ಚೂರು ಕ್ಷೇತ್ರಕ್ಕೆ ಹತ್ತಾರು ವರ್ಷಗಳಿಂದ ಯಾವುದೇ ಅನುದಾನ ಸಿಕ್ಕಿಲ್ಲ. ನಮ್ಮಲ್ಲಿ ನಿವೇಶನ ಇದ್ದು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹಾಗೂ ತರಬೇತಿಗೆ ಒಂದು ಕಟ್ಟಡದ ಅಗತ್ಯತೆ ಇದೆ. ಸರ್ಕಾರದಿಂದ ಅನುದಾನ ದೊರಕಿಸಿಕೊಡಬೇಕು ಹಾಗೂ ಬಬ್ಬುಸ್ವಾಮಿ ಸೇವಕರಿಗೆ ಸರ್ಕಾರದಿಂದ ಮಾಸಾಶನ ನೀಡಿದಲ್ಲಿ ಉತ್ತಮ ಎಂದು ಧರ್ಮದರ್ಶಿ ಗೋಕುಲದಾಸ್ ಬಾರ್ಕೂರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.