ಬ್ರಹ್ಮಾವರ: ಇಲ್ಲಿನ ಎಸ್.ಎಂ.ಎಸ್ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮಾದಕ ವ್ಯಸನ ವಿರೋಧ ದಿನಾಚರಣೆ ಗುರುವಾರ ನಡೆಯಿತು.

ಇಲ್ಲಿನ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಅಶೋಕ ಎಂ. ಮಾತನಾಡಿ, ಮಾದಕ ದ್ರವ್ಯ ಸಮಾಜದ ಸೌಹಾರ್ದತೆ, ಕುಟುಂಬಗಳ ಶಾಂತಿ, ಯುವಜನರ ಭವಿಷ್ಯ ನಾಶ ಮಾಡುತ್ತಿದೆ. ಮಾದಕ ವ್ಯಸನದ ವಿರುದ್ಧ ಎಚ್ಚರಿಕೆ ಮೂಡಿಸಿ, ಜನರಲ್ಲಿ ಜಾಗೃತಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ದಿನಾಚರಣೆ ಒಂದು ದಿನಕ್ಕೆ ಮಾತ್ರವಲ್ಲ, ಇದು ಸಂಕಲ್ಪದ ದಿನ. ನಶೆಮುಕ್ತ ಸಮಾಜದತ್ತ ಮುನ್ನಡೆಯುವ ನಿಸ್ಸೀಮ ಬದ್ಧತೆ ಎಂದರು.

ವಿದ್ಯಾರ್ಥಿಗಳು, ಯುವಕರು, ಪೋಷಕರು ಮಾದಕ ವ್ಯಸನದ ಅಪಾಯಗಳನ್ನು ಅರಿಯಬೇಕಾಗಿರುವ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು, ಸಂಘಟನೆಗಳು, ಸರ್ಕಾರ ಕೈಜೋಡಿಸಿ ಈ ಅಭಿಯಾನ ಯಶಸ್ವಿಗೊಳಿಸಬೇಕು. ನಾವೆಲ್ಲರೂ ಕೈಜೋಡಿಸಿ ನಶೆಮುಕ್ತ ಭಾರತದ ಕನಸು ಕಂಡು ಅದನ್ನು ನಿಜವಾಗಿಸೋಣ ಎಂದು ಹೇಳಿದರು.

ಪ್ರಾಂಶುಪಾಲ ಐವನ್ ದೊನಾತ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸಂತೋಷ ನೀಲಾವರ ಸ್ವಾಗತಿಸಿ ವಂದಿಸಿದರು. ಪ್ರಸನ್ನ ಅಡಿಗ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.