ಉಡುಪಿ: ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಪ್ರಶಾಂತ ಪರಿಸರದ ನಡುವೆ ನಿರ್ಮಾಣಗೊಂಡಿರುವ ನೈಸರ್ಗಿಕ ಚಿಟ್ಟೆ ಉದ್ಯಾನವು 98 ಬಗೆಯ ಚಿಟ್ಟೆಗಳಿಂದ ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

30 ಎಕರೆ ಕಾಡು ಪ್ರದೇಶದಲ್ಲಿ ವ್ಯಾಪಿಸಿರುವ ಈ ಚಿಟ್ಟೆ ಉದ್ಯಾನದ ಗಿಡಮರಗಳ ನಡುವೆ ನಡೆದುಕೊಂಡು ಹೋಗಿ ಪಾತರಗಿತ್ತಿಗಳ ಸೌಂದರ್ಯ ಸವಿಯಬಹುದಾಗಿದೆ.

ಕೃಷಿ ವಿಜ್ಞಾನ ಕೇಂದ್ರದ ಆವರಣದೊಳಗೆ ಒಂದು ವರ್ಷದ ಹಿಂದೆ ಈ ಚಿಟ್ಟೆ ಉದ್ಯಾನವನ್ನು ನಿರ್ಮಿಸಲಾಗಿದೆ. ಉದ್ಯಾನ ಪ್ರವೇಶಿಸುವಲ್ಲಿ ಜೇನುಪೆಟ್ಟಿಗೆಗಳನ್ನೂ ಇಡಲಾಗಿದೆ. ಉದ್ಯಾನದಲ್ಲಿ ಚಿಟ್ಟೆಗಳನ್ನು ಆಕರ್ಷಿಸುವ ವಿವಿಧ ಪ್ರಭೇದದ ಗಿಡಗಳು, ಔಷಧೀಯ ಗುಣವಿರುವ ಸಸ್ಯಗಳಿವೆ.

ಬೆಳಿಗ್ಗೆ 8ಗಂಟೆಯಿಂದ 11 ಗಂಟೆಯೊಳಗೆ ಉದ್ಯಾನಕ್ಕೆ ಭೇಟಿ ನೀಡಿದರೆ ಬಗೆ ಬಗೆಯ ಚಿಟ್ಟೆಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ಉದ್ಯಾನದ ವಿವಿಧೆಡೆ ಚಿಟ್ಟೆಗಳ ಚಿತ್ರ ಮತ್ತು ಮಾಹಿತಿ ಇರುವ ಫಲಕಗಳನ್ನೂ ಸ್ಥಾಪಿಸಲಾಗಿದೆ. ಜೊತೆಗೆ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರ ವಿಭಾಗದ ವಿಜ್ಞಾನಿಗಳೂ ಮಾಹಿತಿ ನೀಡುತ್ತಾರೆ.

ಚಿಟ್ಟೆಗಳನ್ನು ಆಕರ್ಷಿಸುವ ಈಶ್ವರ ಬಳ್ಳಿ, ವಟ್ಟಕಾಕ, ನಿಂಬೆ ಜಾತಿಯ ಗಿಡಗಳು, ಚಕೋತ ಗಿಡ, ರಥಪುಷ್ಪ ಗಿಡಗಳು ಈ ಉದ್ಯಾನದಲ್ಲಿವೆ. ರೈತರಿಗೆ ಹಾಗೂ ಸಾರ್ವಜನಿಕರಿಗೆ ಚಿಟ್ಟೆಗಳ ಚಿತ್ತಾರ ವಿಕ್ಷಿಸಲು ಮುಕ್ತವಾದ ಅವಕಾಶ ಕಲ್ಪಿಸಲಾಗಿದೆ.

‘ಚಿಟ್ಟೆಯ ಲಾರ್ವಗಳು ಗಿಡಗಳ ಚಿಗುರುಗಳನ್ನು ತಿನ್ನುತ್ತವೆ. ಚಿಟ್ಟೆಯ ಮೊಟ್ಟೆಗಳ ಮೇಲೆ ಪರತಂತ್ರ ಜೀವಿಗಳು ಬದುಕುತ್ತವೆ. ಪರಭಕ್ಷಕ ಕೀಟಗಳು ಕೂಡ ಚಿಟ್ಟೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ’ ಎನ್ನುತ್ತಾರೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್.

‘ಉದ್ಯಾನದಲ್ಲಿ ಚಾರಣ ಮಾಡುವಾಗ ಚಿಟ್ಟೆಗಳ ಅಂದ-ಚಂದ, ವಿವಿಧ ಭಂಗಿಯ ಹಾರಾಟದ ಶೈಲಿ, ಮಕರಂದ ಹೀರುವಿಕೆ, ಮರಿಗಳಿಗೆ ಆಸರೆಯಾಗಿರುವ ಸಸ್ಯಗಳು ವೀಕ್ಷಿಸಬಹುದಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಕೃಷಿಯಲ್ಲಿ ಅತಿಯಾಗಿ ಬಳಸುವ ಕೀಟನಾಶಕಗಳಿಂದ ಉಪಯುಕ್ತ ಕೀಟ ಹಾಗೂ ಇತರೆ ಜೀವಿಗಳು ನಾಶವಾದರೂ, ತೋಟ, ಹೊಲಗಳಲ್ಲಿ ಮತ್ತೆ ಮತ್ತೆ ಉಪಯುಕ್ತ ಕೀಟಗಳು ಹಾಗೂ ಇತರೆ ಜೀವಿಗಳು ಕಂಡುಬರಲು ನೈಸರ್ಗಿಕ ಕಾಡುಗಳು ಹಾಗೂ ನೈಸರ್ಗಿಕ ಉದ್ಯಾನಗಳೇ ಕಾರಣ’ ಎಂದೂ ಅವರು ಹೇಳಿದರು.

ಪ್ರಶಾಂತ ವಾತಾವರಣದಲ್ಲಿದೆ ನೈಸರ್ಗಿಕ ಉದ್ಯಾನ ಮನಸ್ಸಿಗೆ ಮುದ ನೀಡುವ ಬಣ್ಣ ಬಣ್ಣದ ಚಿಟ್ಟೆಗಳು

ಚಿಟ್ಟೆಗಳು ಕೂಡ ಮಕರಂದ ಹೀರುತ್ತವೆ. ಈ ಕಾರಣಕ್ಕೆ ಹೆಚ್ಚು ಹೂಬಿಡುವ ಗಿಡಗಳನ್ನು ನೆಟ್ಟರೆ ಚಿಟ್ಟೆಗಳು ಅದರತ್ತ ಆಕರ್ಷಿತವಾಗಿ ಬರುತ್ತವೆ
ರೇವಣ್ಣ ರೇವಣ್ಣನವರ್ ಕೀಟಶಾಸ್ತ್ರಜ್ಞ

ಬಗೆ ಬಗೆಯ ಪ್ರಭೇದ

ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ನೈಸರ್ಗಿಕ ಚಿಟ್ಟೆ ಉದ್ಯಾನದಲ್ಲಿ ಸದರ್ನ್ ಬರ್ಡ್ವಿಂಗ್ ಬ್ಲ್ಯೂ ಮೋರ್ಮೊನ್ ಮಲಬಾರ್ ರೋಸ್ ರೆಡ್ ಹೆಲೆನ್ ಪ್ಯಾರೀಸ್ ಪಿಕಾಕ್ ಕಾಮನ್ ಕ್ರಾ ಬ್ಲ್ಯೂ ಟೈಗರ್ ಚಾಕೋಲೆಟ್ ಪ್ಯಾನ್ಸಿ ಸಿಟ್ರಸ್ ಬಟರ್ಫ್ಲೈ ಗ್ರೇ ಪ್ಯಾನ್ಸಿ ಸೇರಿದಂತೆ 98 ಬಗೆಯ ಚಿಟ್ಟೆಗಳು ಕಂಡುಬರುತ್ತವೆ ಎಂದು ಕೆವಿಕೆಯ ಕೀಟಶಾಸ್ತ್ರಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.