ಹೆಬ್ರಿ: ಯಾವುದೇ ಜಮೀನು ಹೊಂದಿರದ 35 ವರ್ಷಗಳ ಹಿಂದೆ ಮೃತರಾಗಿರುವ ವ್ಯಕ್ತಿಯ ಹೆಸರಿನಲ್ಲಿ ಹಿರಿಯ ನಾಗರಿಕರೊಬ್ಬರ ಜಮೀನು ಸರ್ವೆ ಮಾಡಿಸಲು ನೋಟಿಸ್ ನೀಡಿದ ಸರ್ವೆ ಅಧಿಕಾರಿಗಳ ವಿರುದ್ಧ ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ರಹ್ಮಾವರ ತಾಲ್ಲೂಕಿನ ಕಳ್ತೂರು ಗ್ರಾಮದ ಬಾಬುರಾಯ ಕಾಮತ್ (86) ಎಂಬುವರು ತನಗೆ ಅನ್ಯಾಯವಾಗಿರುವ ಬಗ್ಗೆ ದೂರು ನೀಟಿದ್ದಾರೆ. ಬ್ರಹ್ಮಾವರ ಭೂದಾಖಲೆಗಳ ಕಚೇರಿಯ ಸರ್ವೆ ಸೂಪರ್ವೈಸರ್ ಎಂ.ಸಿ.ಪೂಜಾರಿ ಅವರು ಜಮೀನು ಹೊಂದಿರದ ಮೃತ ಚಂದು ನಾಯ್ಕ ಎಂಬುವರನ್ನು ಜಾಗದ ಅರ್ಜಿದಾರರೆಂದು ಕಾಣಿಸಿ ಜಮೀನು ಮಾಲೀಕ ಬಾಬುರಾಯ ಕಾಮತ್ ಅವರನ್ನೇ ಪ್ರತಿವಾದಿಯನ್ನಾಗಿಸಿ ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಎಂ.ಸಿ.ಪೂಜಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ತಮ್ಮ ಜಮೀನಿನ ಸರ್ವೆ ಕಾರ್ಯ ಕೈಗೊಳ್ಳದಂತೆ ನ್ಯಾಯ ಒದಗಿಸುವಂತೆ ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕರಿಗೆ ದೂರು ನೀಡಲಾಗಿದೆ ಎಂದು ಗಿರೀಶ್ ಕಾಮತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.