ಮಂಗಳವಾರ, ಜೂನ್ 28, 2022
24 °C

ಪ್ರವಾಸಿಗರ ಪರ್ಸ್‌ನಲ್ಲಿದ್ದ ಚಿನ್ನಾಭರಣ, ನಗದು ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮುಂಬೈನಿಂದ ಕೃಷ್ಣಮಠಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಮಹಿಳೆಯ ಪರ್ಸ್‌ನಲ್ಲಿದ್ದ ಚಿನ್ನಾಭರಣ, ನಗದು ಹಾಗೂ ದಾಖಲೆಗಳನ್ನು ಕಳವು ಮಾಡಲಾಗಿದೆ.

ಶಾಂತಾ ಜಿ.ಕುಂದರ್‌ ಸೋಮವಾರ ಕೃಷ್ಣಮಠಕ್ಕೆ ಬಂದು ದೇವರ ದರ್ಶನ ಪಡೆದು ಊಟ ಮಾಡಿದ ಬಳಿಕ ಸುತ್ತಾಡುವಾಗ ಕಳ್ಳರು ಪರ್ಸ್‌ ಎಗರಿಸಿದ್ದಾರೆ. ಪರ್ಸ್‌ನಲ್ಲಿ ₹ 1,40,000 ಮೌಲ್ಯದ 30 ಗ್ರಾಂ ಹವಳದ ಸರ, ಆಧಾರ್‌ಕಾರ್ಡ್‌, ಪಾನ್‌ಕಾರ್ಡ್‌, ಎಟಿಎಂ ಕಾರ್ಡ್‌ ಹಾಗೂ ₹ 4,000 ನಗದು ಇತ್ತು.

ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು