ಭಾನುವಾರ, ಜುಲೈ 25, 2021
25 °C

ಬಾಲಕನನ್ನು ಅಪಹರಿಸಿದ ವ್ಯಕ್ತಿ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ನಗರದ ಕರಾವಳಿ ಬೈಪಾಸ್‌ ಬಳಿ ವಾಸವಾಗಿದ್ದ ಬಾಗಲಕೋಟೆ ಮೂಲದ ಕೂಲಿ ಕಾರ್ಮಿಕ ದಂಪತಿಯ ಮಗುವನ್ನು ಕಿಡಿಗೇಡಿಯೊಬ್ಬ ಭಾನುವಾರ ಅಪಹರಿಸಿ ಪರಾರಿಯಾಗಿದ್ದಾನೆ.

ಆರೋಪಿ ಮಗುವನ್ನು ಎತ್ತಿಕೊಂಡು ಕುಂದಾಪುರ ಮಾರ್ಗದ ಬಸ್‌ ಹತ್ತುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಧೋಳ ತಾಲ್ಲೂಕಿನ ಅರುಣ್ ಹಾಗೂ ಭಾರತಿ ದಂಪತಿಯ ಎರಡೂವರೆ ವರ್ಷದ ಶಿವರಾಜ್ ಅಪಹರಣಕ್ಕೊಳಗಾದ ಮಗು. ದಂಪತಿಗೆ ಪರಿಚಿತನಾಗಿರುವ ಪರಶು ಎಂಬಾತ ಕೃತ್ಯ ಎಸಗಿರುವ ಸಂಶಯವಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಪಹರಣ ಹೇಗೆ

ಆರೋಪಿ ಪರಶು ಕೆಲವು ದಿನಗಳ ಹಿಂದಷ್ಟೆ ದಂಪತಿಗೆ ಪರಿಚಿತನಾಗಿದ್ದ. ಪ್ರತಿದಿನ ಮಗುವಿಗೆ ಚಾಕ್‌ಲೇಟ್‌ ಕೊಡಿಸಿ ಸಲುಗೆ ಬೆಳೆಸಿಕೊಂಡಿದ್ದ. ಭಾನುವಾರ ಬೆಳಿಗ್ಗೆ ತಿಂಡಿ ಕೊಡಿಸಿಕೊಂಡು ಬರುವುದಾಗಿ ಮಗುವನ್ನು ಕರೆದೊಯ್ದು ಮರಳಿ ಬಂದಿಲ್ಲ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಸಾಕ್ಷ್ಯ ಹಾಗೂ ಬಸ್‌ನ ಸಿಬ್ಬಂದಿ ಹೇಳಿಕೆಯನ್ನಾಧರಿಸಿ ಉಡುಪಿಯ ಸಂತೆಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಆರೋಪಿಗೆ ಶೋಧ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು