ಉಡುಪಿ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಾಡು ಪ್ರಸಾದಕ್ಕೆ ಆಕಳ ತುಪ್ಪದ ಬದಲು ಪ್ರಾಣಿಜನ್ಯ ಕೊಬ್ಬಿನ ಅಂಶ ಸೇರಿಸಿರುವ ಕೃತಕ ತುಪ್ಪ ಬಳಸಿರುವುದು ತಿಳಿದು ಖೇದವಾಗಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಇಂತಹ ಕೃತಕ ತುಪ್ಪ ತಯಾರಿಸುವ ಅಡ್ಡೆಗಳನ್ನು ಕಂಡುಹಿಡಿದು, ಇದರಲ್ಲಿ ತೊಡಗಿರುವವರಿಗೆ ಶಿಕ್ಷೆ ನೀಡಬೇಕು. ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಸರ್ಕಾರದ ಸುಪರ್ದಿಯಿಂದ ಮುಕ್ತವಾಗಿಸಿ ಹಿಂದೂ ಸಂಸ್ಥೆಗಳಿಗೆ ನೀಡಬೇಕು ಎನ್ನುವ ಸುಪ್ರೀಂ ಕೋರ್ಟ್ ತೀರ್ಪು ಸತ್ಯ ಎನ್ನುವುದು ಇಂತಹ ಘಟನೆಗಳಿಂದ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.