ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಸಡಿಲ: ವ್ಯಾಪಾರ ವಹಿವಾಟು ಆರಂಭ

ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಎಲ್ಲ ಅಂಗಡಿಗಳು ತೆರೆಯಲು ಅನುಮತಿ: ಗ್ರಾಹಕರಿಂದ ತುಂಬಿದ್ದ ಮಳಿಗೆಗಳು
Last Updated 22 ಜೂನ್ 2021, 18:36 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿರ್ಬಂಧಗಳು ಸಡಿಲವಾದ ಬೆನ್ನಲ್ಲೇ ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿರುವ ದೃಶ್ಯಗಳು ಮಂಗಳವಾರ ಕಂಡುಬಂದವು. ಸುಧೀರ್ಘ ಅವಧಿಗೆ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು ತೆರೆದವು. ವ್ಯಾಪಾರ ವಹಿವಾಟು ಆರಂಭವಾಯಿತು. ಸಾರ್ವಜನಿಕರಿಂದ ಖರೀದಿ ಉತ್ಸಾಹವೂ ಜೋರಾಗಿತ್ತು.

ಲಾಕ್‌ಡೌನ್ ಕಾರಣದಿಂದ ಸುಧೀರ್ಘ ಅವಧಿಗೆ ಮುಚ್ಚಿದ್ದ ಬಟ್ಟೆ ಅಂಗಡಿಗಳು, ಶೂ, ಚಪ್ಪಲಿ ಮಾರಾಟ ಮಳಿಗೆ, ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಮಳಿಗೆಗಳು, ಚಿನ್ನಾಭರಣ ಮಳಿಗೆ ಹಾಗೂ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲದ ಎಲ್ಲ ವಾಣಿಜ್ಯ ಚಟುವಟಿಕೆಗಳು ಆರಂಭವಾದವು. ಬಹುತೇಕ ಮಳಿಗೆಗಳಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗಿರುವುದು ಕಂಡುಬಂತು.

ದೀರ್ಘ ಕಾಲ ಮುಚ್ಚಿದ್ದ ಬಟ್ಟೆ ಅಂಗಡಿಗಳು, ಶೂ, ಚಪ್ಪಲಿ ಮಾರಾಟ ಮಳಿಗೆಗಳು, ಗೃಹೋಪಯೋಗಿ ವಸ್ತುಗಳ ಶೋ ರೂಂ, ಸ್ಟೇಷನರಿ ಅಂಗಡಿಗಳು, ಮೊಬೈಲ್‌ ಮಾರಾಟ ಮಳಿಗೆ ಹಾಗೂ ಸರ್ವೀಸ್ ಸೆಂಟರ್‌ಗಳಲ್ಲಿ ಗ್ರಾಹಕರು ಹೆಚ್ಚಾಗಿದ್ದರು. ಸಂಜೆ 5ರವರೆಗೂ ಬಿರುಸಿನ ವಹಿವಾಟು ನಡೆಯಿತು.

ಸೋಮವಾರ ಸ್ವಚ್ಛತಾ ಕಾರ್ಯ:ರಾಜ್ಯ ಸರ್ಕಾರ ಒಂದು ದಿನ ತಡವಾಗಿ ಅನ್‌ಲಾಕ್ ಆದೇಶ ಹೊರಡಿಸಿದ್ದರಿಂದ ಸೋಮವಾರ ಬಹುತೇಕ ವ್ಯಾಪಾರಿಗಳು ಅಂಗಡಿ–ಮುಂಗಟ್ಟುಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಗ್ರಾಹಕರನ್ನು ಸೆಳೆಯಲು ಒಳಾಂಗಣ ಹಾಗೂ ಹೊರಾಂಗಣವನ್ನು ಅಲಂಕಾರ ಮಾಡಿದರು.

ಆನ್‌ಲೈನ್‌ನಲ್ಲಿ ಆಹಾರ ಸರಬರಾಜು ವ್ಯವಸ್ಥೆಯಲ್ಲಿ ಇರದೆ ಬಾಗಿಲು ಮುಚ್ಚಿದ್ದ ಸಣ್ಣ ಹಾಗೂ ಮಧ್ಯಮ ಗಾತ್ರದ ಹೋಟೆಲ್‌ಗಳು ಬಾಗಿಲು ತೆರೆದಿದ್ದವು. ಹೋಟೆಲ್‌ ಒಳಾಂಗಣವನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಲಾಗಿತ್ತು. ಹಲವು ಹೋಟೆಲ್‌ಗಳಲ್ಲಿ ಬಿಸಿನೀರಿನ ವ್ಯವಸ್ಥೆ ಇತ್ತು. ಗ್ರಾಹಕರು ಕುಳಿತು ಆಹಾರ ಸೇವನೆ ಮಾಡಿದರು.

ಬಹುತೇಕ ಅಂಗಡಿಗಳ ಮುಂದೆ ‘ಗ್ರಾಹಕರು ಕಡ್ಡಾಯ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ಅಂತರ ಕಾಯ್ದುಕೊಳ್ಳಬೇಕು’ ಎಂಬ ಫಲಕವನ್ ನು ಹೋಟೆಲ್‌ಗಳ ಮುಂದೆ ಹಾಕಲಾಗಿತ್ತು.

ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಿದ್ದು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಗೆ ಬಸ್‌ಗಳು ಸಂಚರಿಸಿದವು. ಆದರೆ, ಬೆರಳೆಣಿಕೆ ಖಾಸಗಿ ಬಸ್‌ಗಳು ಮಾತ್ರ ಸಂಚರಿಸಿದವು. ನಗರ ಸಾರಿಗೆ ಬಸ್‌ಗಳ ಸಂಚಾರವೂ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT