ಭಾನುವಾರ, ಆಗಸ್ಟ್ 1, 2021
27 °C
34 ಕೋವಿಡ್‌–19 ದೃಢ, ಐಎಲ್‌ಐ ಲಕ್ಷಣಗಳಿದ್ದ 11 ಜನರಲ್ಲಿ ಸೋಂಕು

18 ಮಂದಿಯಲ್ಲಿ ಪತ್ತೆಯಾಗದ ಸೋಂಕಿನ ಮೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಕೊರೊನಾ‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಶುಕ್ರವಾರ 34 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ.‌

18 ಮಂದಿಗೆ ಸೋಂಕಿನ ಮೂಲವೇ ಪತ್ತೆಯಾಗದಿರುವುದು ಆತಂಕ ಮೂಡಿಸಿದೆ. ಸೋಂಕು ಹೇಗೆ ತಗುಲಿದೆ ಎಂದು ಅಧಿಕಾರಿಗಳು ಮೂಲವನ್ನು ಪತ್ತೆ ಹಚ್ಚುತ್ತಿದ್ದಾರೆ. ಜತೆಗೆ, ಐಎಲ್‌ಐ ಲಕ್ಷಣಗಿರುವ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿದೇಶಗಳಿಂದ ಬಂದ ಮೂವರಿಗೆ, ಅಂತರ ಜಿಲ್ಲೆ ಪ್ರಯಾಣ ಮಾಡಿರುವ ಇಬ್ಬರಿಗೆ ಸೋಂಕು ತಗುಲಿದೆ.   

698 ಮಾದರಿ ರವಾನೆ: ಶುಕ್ರವಾರ ಸಾರಿ ಲಕ್ಷಣಗಳಿರುವ ನಾಲ್ವರು, ಕೋವಿಡ್ ಶಂಕಿತ 106, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 106, ಐಎಲ್‌ಐ ಲಕ್ಷಣಗಳಿರುವ 54, ಇತರೆ ಕೋವಿಡ್‌ ಹಾಸ್ಟ್‌ಸ್ಪಾಟ್‌ಗಳ ಸಂಪರ್ಕಕ್ಕೆ ಬಂದ 698 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 2,424 ವರದಿಗಳು ಬರುವುದು ಬಾಕಿ ಇದೆ.

ಸೋಂಕಿನ ಲಕ್ಷಣಗಳು ಇರುವ 11 ಪುರುಷರು ಹಾಗೂ 10 ಮಹಿಳೆಯರನ್ನು ಐಸೊಲೇಷನ್‌ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,477ಕ್ಕೇರಿಕೆಯಾಗಿದ್ದು, 1,224 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 250 ಸಕ್ರಿಯ ಪ್ರಕರಣಗಳು ಇವೆ.

ಸೋಂಕಿನ ಮಾಹಿತಿ

ಆರೋಗ್ಯ ತಪಾಸಣೆ–26

ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾ–0

ಗುಣಮುಖರಾದವರು–0

ಹೊಸ ಸೇರ್ಪಡೆ-21

ಹೋಂ ಕ್ವಾರಂಟೈನ್‌ ಪೂರ್ಣ-0

ಪರೀಕ್ಷೆಗೆ ಕಳುಹಿಸಿದ ಮಾದರಿ–698

ವರದಿ ಪಾಸಿಟಿವ್‌–34

ವರದಿ ನೆಗೆಟಿವ್‌-673

–––––––––
ಆರೋಗ್ಯ ತಪಾಸಣೆ–6,136

ಹೋಂ ಕ್ವಾರಂಟೈನ್‌–1,261

ಮಾದರಿ–21,409

ಪಾಸಿಟಿವ್‌–1,443

ನೆಗೆಟಿವ್‌–17,508

ಸಕ್ರಿಯ ಪ್ರಕರಣ–250

ಮರಣ–3

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು