ಮಂಗಳವಾರ, ಆಗಸ್ಟ್ 16, 2022
22 °C

‘ಬಾಲಕರು ಅಪಹರಣವಾಗಿಲ್ಲ: ಪುನರ್ವಸತಿ ಕೇಂದ್ರದಲ್ಲಿದ್ದಾರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಈಚೆಗೆ ನಗರದಲ್ಲಿ ಇಬ್ಬರು ಬಾಲಕರ ಅಪರಹಣ ನಡೆದಿಲ್ಲ. ಬಾಲಕರು ಪುನರ್ವಸತಿ ಕೇಂದ್ರದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಳಿಸಿದೆ.

ಬಾಲಕರ ಪೋಷಕರು ಮದ್ಯಪಾನ ಮಾಡಿ ಮಕ್ಕಳಿಗೆ ನಿತ್ಯ ಥಳಿಸುತ್ತಿದ್ದರಿಂದ ಬೇಸತ್ತಿದ್ದ ಮಕ್ಕಳು ನಿಟ್ಟೂರು ಬಾಲಕಿಯರ ಬಾಲಮಂದಿರದಲ್ಲಿದ್ದ ಅಕ್ಕನ ಹಾಸ್ಟೆನಲ್ಲಿ ಉಳಿಯುವುದಾಗಿ ತಿಳಿಸಿ ರಕ್ಷಣೆ ಹಾಗೂ ಪುನರ್ವಸತಿಗೆ ಕೋರಿದ್ದರು. ಈ ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಿಗೆ ತಿಳಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಕ್ಕಳನ್ನು ಪುನರ್ವಸತಿಗಾಗಿ ಹಟ್ಟಿಯಂಗಡಿಯ ‘ನಮ್ಮ ಭೂಮಿ’ ಸಂಸ್ಥೆಗೆ ದಾಖಲಿಸಿದ್ದರು.

ಬಾಲಕನ ಪೋಷಕರಾದ ನಾಗರಾಜ್ ಈ ಬಗ್ಗೆ ವಿಚಾರಿಸದೆ ನೇರವಾಗಿ ಮಹಿಳಾ ಠಾಣೆಗೆ ದೂರು ನೀಡಿದ್ದರಿಂದ ಗೊಂದಲ ಉಂಟಾಗಿದೆ. ಮಕ್ಕಳನ್ನು ಮುಂದೆ ಸರಿಯಾಗಿ ನೋಡಿಕೊಳ್ಳುವುದಾಗಿ ಪೋಷಕರು ಅಗತ್ಯ ದಾಖಲೆಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಿ ಮಕ್ಕಳನ್ನು ವಶಕ್ಕೆ ಪಡೆಯಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು