ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಫ್ಲ್ಯಾಟ್‌ಗೆ ನುಗ್ಗಲು ಮುಸುಕುಧಾರಿಗಳಿಂದ ವಿಫಲ ಯತ್ನ

Published : 3 ಆಗಸ್ಟ್ 2024, 6:47 IST
Last Updated : 3 ಆಗಸ್ಟ್ 2024, 6:47 IST
ಫಾಲೋ ಮಾಡಿ
Comments

ಉಡುಪಿ: ನಾಲ್ವರು ಮುಸುಕುಧಾರಿಗಳು ನಗರದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದಕ್ಕೆ ನುಗ್ಗಲು ವಿಫಲ ಯತ್ನ ನಡೆಸಿರುವುದು ಸಿ.ಸಿ.ಟಿ.ವಿ.ಕ್ಯಾಮೆರಾದಲ್ಲಿ ದಾಖಲಾಗಿದೆ.

ರಾಡ್‌ಗಳನ್ನು ಹಿಡಿದುಕೊಂಡು, ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ ದುಷ್ಕರ್ಮಿಗಳು ಅಂಬಲಪಾಡಿಯ ಫ್ಲ್ಯಾಟ್‌ಗೆ ಗುರುವಾರ ಮುಂಜಾನೆ ನುಗ್ಗಲು ಯತ್ನಿಸಿದ್ದಾರೆ.

ಒಳಗೆ ಪ್ರವೇಶಿಸಲು ಸಾಧ್ಯವಾಗದೆ ಅವರು ಮರಳುತ್ತಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿದೆ.

ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದವರು ಊರಿನಲ್ಲಿ ಇರಲಿಲ್ಲ. ಫ್ಯಾಟ್‌ನ ದ್ವಾರದ ಬೀಗವನ್ನು ದುಷ್ಕರ್ಮಿಗಳು ಮುರಿದಿದ್ದಾರೆ. ಆದರೆ ಅವರಿಗೆ ಒಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಅಪಾರ್ಟ್‌ಮೆಂಟ್‌ನ ಅಧ್ಯಕ್ಷ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗಾಗಿ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT