ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರ್ವ | ಮಧುಮೇಹ ರೋಗ ಪತ್ತೆಮಾಡುವ ವೈಬ್‌ಸೈಟ್ ಅಭಿವೃದ್ಧಿ

Published 1 ಜೂನ್ 2024, 13:58 IST
Last Updated 1 ಜೂನ್ 2024, 13:58 IST
ಅಕ್ಷರ ಗಾತ್ರ

ಶಿರ್ವ: ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆರೊನ್ ಶರೊನ್ ಡಿಸೋಜ, ದೃಶ್ಯ ಶೆಟ್ಟಿ, ಮಿಸ್ಬಾ ಬಾನು, ಮುನೀರ್, ಪೀಟರ್ ಕೇಟಾನೊ ಜೋವೊ ಪ್ರಾಧ್ಯಾಪಕಿ ಚೈತ್ರಾ ಮಾರ್ಗದರ್ಶನದಲ್ಲಿ ಪೂರ್ವಾಭಾವಿಯಾಗಿ ಮಧುಮೇಹ ಪತ್ತೆಹಚ್ಚುವ ವೈಬ್‌ಸೈಟ್‌ ಅಭಿವೃದ್ಧಿಪಡಿಸಿದ್ದಾರೆ.

ಉಪವಾಸ ಮತ್ತು ರಕ್ತದ ಸಕ್ಕರೆ ಮಟ್ಟ ಆಧರಿಸಿ, ಗ್ಲೂಕೋಸ್ ಮಟ್ಟ, ರಕ್ತದೊತ್ತಡ ಮತ್ತು ವಯಸ್ಸು ಆಧರಿಸಿ ಈ ವೈಬ್‌ಸೈಟ್‌ನಲ್ಲಿ ಮಧುಮೇಹ ಪತ್ತೆಹಚ್ಚಬಹುದು. ಈ ವ್ಯವಸ್ಥೆ ಬಳಸುವ ವ್ಯಕ್ತಿಗೆ ಮಧುಮೇಹ ಸ್ಥಿತಿಗೆ ಅನುಗುಣವಾಗಿ ಆಹಾರ ಪದ್ಧತಿ, ಆರೋಗ್ಯ ನಿರ್ವಹಣೆ ಬಗ್ಗೆ ಮಾಹಿತಿ ತಿಳಿದುಕೊಂಡು ಆರೋಗ್ಯಕ್ಕೆ ಅನುಗುಣವಾಗಿ ಜೀವನ ಶೈಲಿ ಬದಲಾಯಿಸಿಕೊಳ್ಳಲು ಸಹಕಾರಿ ಎಂದು ಪ್ರಾಂಶುಪಾಲ ತಿರುಮಲೇಶ್ವರ ಭಟ್, ಗಣಕಯಂತ್ರ ವಿಭಾಗ ಮುಖ್ಯಸ್ಥೆ ಸೌಮ್ಯ ಜೆ.ಭಟ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT