ಹೆಬ್ರಿ: ‘ದೇವರ ಸಂಪತ್ತನ್ನು ಜನರ ಒಳಿತಿಗಾಗಿ ಶ್ರೀಧರ್ಮಸ್ಥಳ ಕ್ಷೇತ್ರ ವಿನಿಯೋಗ ಮಾಡಿದೆ. ಕ್ಷೇತ್ರದ ವಿರುದ್ಧ ಯಾರೂ ಅಪಪ್ರಚಾರ ಮಾಡಿದರೂ ಕ್ಷೇತ್ರದ ಕೀರ್ತಿ ಕಡಿಮೆಯಾಗುವುದಿಲ್ಲ. ಸರ್ಕಾರ ಮಾಡಲಾಗದಂತಹ ಸಾಧನೆ, ಅಭಿವೃದ್ಧಿ ಯೋಜನೆ ಮಾಡಿದೆ. ಕೃಷಿಗೆ ಆದ್ಯತೆ ನೀಡಿ ರೈತರನ್ನು ಮೇಲೆತ್ತಿದ ಕೀರ್ತಿ ಧರ್ಮಸ್ಥಳದ ಯೋಜನೆಯದು’ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಅವರು ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತಾಲ್ಲೂಕು ಘಟಕದ ವತಿಯಿಂದ ಶಿವಪುರ ಪಾಂಡುಕಲ್ಲು ಶಂಕರ ಬಡ್ಕಿಲಾಯ ಕೃಷಿ ಕ್ಷೇತ್ರದಲ್ಲಿ ನಡೆದ ಯಂತ್ರಶ್ರೀ ಹದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯೋಜನೆಯ ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ಮಾತನಾಡಿ, ಯಾಂತ್ರೀಕರಣದ ಮೂಲಕ ರೈತರು ಕೃಷಿ ಮಾಡಿದಾಗ ಲಾಭ ಪಡೆಯಬಹುದು. ಇಂದು ಉಳುಮೆಯಿಂದ ಕಟಾವಿನ ತನಕ ಬೇಕಾದ ವ್ಯವಸ್ಥೆಯನ್ನು ಯೋಜನೆ ಮಾಡಿದೆ. ಹಡಿಲು ಭೂಮಿ ಅಭಿವೃದ್ಧಿ ಯೋಜನೆಯಲ್ಲಿಯೂ ನಾವು ಯಶಸ್ವಿಯಾಗಿದ್ದೇವೆ ಎಂದರು.

ಹಿರಿಯ ಕೃಷಿಕ ಗೋವಿಂದ ಕುಲಾಲ್, ಸಂಶೋಧಕ ರಾಘವೇಂದ್ರ ರಾವ್, ಯಂತ್ರಶ್ರೀ ಯೋಧರಾದ ಬೆಳ್ವೆ ಕೃಷ್ಣ ನಾಯ್ಕ್, ವಾಸು ಕುಲಾಲ್, ರಮೇಶ್, ಶಂಕರ್ ಬಡ್ಕಿಲಾಯ ಅವರನ್ನು ಗೌರವಿಸಲಾಯಿತು.

ಎಸ್ಕೆಡಿಆರ್ಡಿಪಿ ಯೋಜನಾಧಿಕಾರಿ ಲೀಲಾವತಿ, ಕೇಂದ್ರ ಕಚೇರಿಯ ಯೋಜನಾಧಿಕಾರಿ ಬಾಲಕೃಷ್ಣ ಗೌಡ, ಉದ್ಯಮಿ ಬಿ. ಹರೀಶ್ ಪೂಜಾರಿ, ಪ್ರಮುಖರಾದ ಶಂಕರ್ ಬಡ್ಕಿಲಾಯ, ಮೋಹನ ದಾಸ್ ನಾಯಕ್, ಜಗನ್ನಾಥ ಕುಲಾಲ್, ಸುರೇಶ್ ಶೆಟ್ಟಿ, ಪಟ್ಟಾಭಿ ರಾಮಚಂದ್ರ ಭಟ್, ರಮೇಶ ಪೂಜಾರಿ ಶಿವಪುರ, ಶೋಭಾ ಶೆಟ್ಟಿ, ಹರೀಶ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ವಸಂತ ಕುಮಾರ್ ಶೆಟ್ಟಿ ಬೆಳ್ವೆ, ಶಂಕರ ಶೆಟ್ಟಿ ಬೆಳ್ವೆ, ರತ್ನಾಕರ ಪೂಜಾರಿ ಮಾತಿಬೆಟ್ಟು, ಸುರೇಶ ಶೆಟ್ಟಿ ಆರ್ಡಿ, ರಾಘವೇಂದ್ರ ಭಟ್, ಯೋಗಾನಂದ ಪೂಜಾರಿ, ಹರೀಶ್ ನಾಯ್ಕ, ಸತೀಶ್ ನಾಯಕ್, ಚಂದ್ರ ನಾಯ್ಕ್, ಪ್ರವೀಣ್ ಹೆಗ್ಡೆ, ನಾರಾಯಣ ನಾಯ್ಕ್ ಸಂತೆಕಟ್ಟೆ, ಸತೀಶ ನಾಯ್ಕ, ಮೇಲ್ವಿಚಾರಕಿ ರೇವತಿ, ಕೃಷಿ ಮೇಲ್ವಿಚಾರಕ ಉಮೇಶ್ ಬಿ.ಕೆ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಕೃಷಿಕರು ಭಾಗವಹಿಸಿದ್ದರು. ಕೃಷಿ ಮೇಲ್ವಿಚಾರಕ ಉಮೇಶ್ ನಿರೂಪಿಸಿದರು. ಮೇಲ್ವಿಚಾರಕಿ ರೇವತಿ ಸ್ವಾಗತಿಸಿದರು.

ಸಾಂಪ್ರದಾಯಿಕ ತಿನಿಸುಗಳ ಪ್ರದರ್ಶನ

ಹುರುಳಿ ಚಟ್ನಿ ತಿಮರೆ ಚಟ್ನಿ ಮಾವಿನಕಾಯಿ ಚಟ್ನಿ ಉದ್ದಿನ ಚಟ್ನಿ ಉಪ್ಪಿನ ಹುಡಿ ನೀರಿಗೆ ಹಾಕಿದ ಮಾವಿನಕಾಯಿ ಚಟ್ನಿ ಹೆಬ್ಬೆಸಿನ ಚಟ್ನಿ ಕಣಿಲೆ ಪಲ್ಯ ಹಲಸಿನ ಸೊಳೆ ಪಲ್ಯ ಗುಜ್ಜೆ ಪಲ್ಯ ಪತ್ರೊಡೆ ಶಾವಿಗೆ ಕಾಯಿಹಾಲು ಓಡು ದೋಸೆ ಕೆನೆಪುಂಡಿ ರಾಗಿ ಮಣ್ಣಿ ಅಕ್ಕಿ ಪುಡಿ ಅಕ್ಕಿ ಉಂಡೆ ಚಿಮಿಣಿದಕ್ಕ್ ಅರಸಿನ ಎಲೆ ಕಡುಬು ಶೇಂಗಾ ಹುರಿಗಡ್ಲೆ ಅತ್ರಾಸ ಪತ್ರೊಡೆ ಗುಳಿ ಅಪ್ಪ ಚಕಟೆ ಸೊಪ್ಪಿನ ಪಲ್ಯ ಅಕ್ಕಿ ಉಂಡೆ ಕೊಟ್ಟೆ ಕಡುಬು ಅಕ್ಕಿ ಪಾಯಸ ಮೆಂತೆ ಗಂಜಿ ಸಹಿತ ಹಲವು ಗ್ರಾಮೀಣ ತಿನಸುಗಳಿದ್ದವು. ಅಜ್ಜಿ ಕತೆ ಭತ್ತ ಕುಟ್ಟುವುದು ಗದ್ದೆನೆಟ್ಟಿ ಮಾಡುವುದು ರೈತಗೀತೆ ಉಳುಮೆ ಮಾಡುವಾಗ ಒಲಳು ಹಾಕುವುದು ಕಾರ್ಯಕ್ರಮದ ಅದೃಷ್ಟ ರೈತ ಚೆನ್ನೆಮಣೆ ಆಟ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.