ಶನಿವಾರ, ಜನವರಿ 16, 2021
27 °C

ಸಂತೋಷ್ ಆತ್ಮಹತ್ಯೆ ಯತ್ನ: ತನಿಖೆ ನಡೆದರೆ ಸತ್ಯ ಬಯಲಾಗಬಹುದೆಂದ ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DK Shivakumar in Udupi

ಉಡುಪಿ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕೌಟುಂಬಿಕ ಸಮಸ್ಯೆ ಕಾರಣವಲ್ಲ, ರಾಜಕೀಯ ಒತ್ತಡ ಕಾರಣವಿರಬಹುದು ಎಂದು ಅವರ ಪತ್ನಿ ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದರೆ ಸತ್ಯ ಹೊರಬೀಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಭಾನುವಾರ ಉಡುಪಿಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು‌, ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನಿಸಿರುವುದು ಗಂಭೀರ ವಿಚಾರ. ವಿರೋಧ ಪಕ್ಷದ ನಾಯಕನಾಗಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಸಂತೋಷ್ ಆತ್ಮಹತ್ಯೆಗೆ ಕಾರಣ ಏನು ಎಂಬ ಸತ್ಯ ಜನರಿಗೆ ತಿಳಿಯಬೇಕು. ತನಿಖೆ ನಡೆದರೆ ಆತ್ಮಹತ್ಯೆಗೆ ಕ್ಯಾಸೆಟ್ ಕಾರಣವೇ, ರೆಕಾರ್ಡಿಂಗ್ ಕಾರಣವೇ ಎಂಬ ವಿಚಾರ ತಿಳಿದು ಬರಲಿದೆ ಎಂದರು.

ಇದನ್ನೂ ಓದಿ: 


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾನುವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದರು.

ಬೀದಿಯಲ್ಲಿ ಹೋಗುವ ವ್ಯಕ್ತಿ ಅಥವಾ ಕಾರ್ಯಕರ್ತ ಆತ್ಮಹತ್ಯೆಗೆ ಯತ್ನಿಸಿದ್ದಲ್ಲ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನಿಸಿರುವುದು ಸಾಮಾನ್ಯ ವಿಚಾರವಲ್ಲ. ಸಂತೋಷ್‌ ಸಾಲದ ಸುಳಿಯಲ್ಲೂ ಸಿಲುಕಿರಕಿಲ್ಲ. ಆತ್ಮಹತ್ಯೆ ಯತ್ನಕ್ಕೆ ರಾಜಕೀಯ ಒತ್ತಡ ಕಾರಣಬಹುದು ಎಂಬ ಅನುಮಾನವಿದ್ದು, ತನಿಖೆಯಿಂದ ಸತ್ಯ ಹೊರಬರಬಬೇಕು ಎಂಬುದಷ್ಟೆ ನನ್ನ ಒತ್ತಾಯ‌. ನನ್ನ ಬಳಿ ಯಾವ ಕ್ಯಾಸೆಟ್ ಇಲ್ಲ, ಸ್ನೇಹಿತರು ಹಂಚಿಕೊಂಡ ವಿಚಾರವನ್ನು ಮಾಧ್ಯಮಗಳ ಮುಂದ ಹೇಳಿದ್ದೇನೆ ಅಷ್ಟೆ. ಅದಕ್ಕೆ ಬಿಜೆಪಿ ನಾಯಕರು ಮೈಪರಚಿಕೊಳ್ಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರು ಈಶ್ವರಪ್ಪ ವಿರುದ್ಧ ಹರಿಹಾಯ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು