ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಕೈರಂಪಳಿ ಬಲೆಗೆ ಬಿದ್ದ ರಾಶಿ ಪಾಂಪ್ಲೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮಲ್ಪೆಯ ತೊಟ್ಟಂ ಬಳಿಯ ಸಮುದ್ರದಲ್ಲಿ ಮೀನುಗಾರರ ಬಲೆಗೆ ಭರ್ಜರಿ ಮೀನಿನ ಬೇಟೆ ಸಿಕ್ಕಿದೆ. ಆಳ ಸಮುದ್ರದಲ್ಲಿ ಹೆಚ್ಚಾಗಿ ಕಾಣಸಿಗುವ ಬಹುಬೇಡಿಕೆಯ ಪಾಂಪ್ಲೆಟ್‌ ಮೀನುಗಳು ಸಮುದ್ರದ ದಡದಲ್ಲಿಯೇ ರಾಶಿ ರಾಶಿಯಾಗಿ ಸಿಕ್ಕಿವೆ.

ಸಾಂಪ್ರದಾಯಿಕ ಕೈರಂಪಳಿ ಬಲೆಗೆ ಬಿದ್ದಿದ್ದ ಮೀನುಗಳನ್ನು ಮೀನುಗಾರರೆಲ್ಲ ಒಟ್ಟಾಗಿ ಸೇರಿ ತಡಕ್ಕೆ ಎಳೆದು ತಂದರು. ಬಳಿಕ ಮೀನುಗಳನ್ನು ಬುಟ್ಟಿಗೆ ತುಂಬಿಸಿಕೊಂಡು ಬಂದರಿಗೆ ಸಾಗಿಸಿದರು.

ಬಲೆಗೆ ಮೀನಿನ ರಾಶಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸ್ಥಳೀಯರು ತೀರದಲ್ಲಿ ಜಮಾಯಿಸಿದ್ದರು. ಉಡುಪಿ ಹಾಗೂ ಸುತ್ತಮುತ್ತಲಿನ ಭಾಗಗಳ ಗ್ರಾಹಕರು ಬಂದು ಮೀನು ಖರೀದಿಸಿದರು.

ದುಬಾರಿ ಬೆಲೆಯ ಪಾಂಪ್ಲೆಟ್‌ ಮೀನುಗಳು ಮಲ್ಪೆ ಬಂದರಿನಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದ್ದು, ಮೀನುಗಾರರಿಗೆ ಬಂಪರ್ ಬೆಲೆ ಸಿಕ್ಕಿದೆ. ಸಾಮಾನ್ಯವಾಗಿ ಕೈರಂಪಳಿ ಬಲೆಗೆ ಪಾಂಪ್ಲೆಟ್‌ ಮೀನುಗಳು ಸಿಗುವುದು ಬಹಳ ಅಪರೂಪ ಎನ್ನುತ್ತಾರೆ ಮೀನುಗಾರರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು