ಭಾನುವಾರ, ಸೆಪ್ಟೆಂಬರ್ 22, 2019
22 °C

ಭಟ್ಕಳದ ಮೀನುಗಾರ ಚಂದ್ರಶೇಖರ್ ಚಿಕಿತ್ಸೆಗೆ ಸ್ಪಂದಿಸದೆ ಸಾವು

Published:
Updated:

ಉಡುಪಿ: ಮೂರು ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಭಟ್ಕಳದ ಮೀನುಗಾರ ಚಂದ್ರಶೇಖರ್ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ. ಚಂದ್ರಶೇಖರ್ ಅವರು ಸುವರ್ಣ ತ್ರಿಭುಜ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ರಮೇಶ್ ಅವರ ಸಹೋದರ.

ಸುವರ್ಣ ತ್ರಿಭುಜ ಭೋಟ್‌ ನಾಪತ್ತೆಯಾದ ಬಳಿಕ ಚಂದ್ರಶೇಖರ್ ಮಾನಸಿಕ ಖಿನ್ನತೆಗೆ ಜಾರಿದ್ದರು. ಮೀನುಗಾರಿಕೆಗೆ ತೆರಳುವುದನ್ನು ಬಿಟ್ಟು ಒಂಟಿಯಾಗಿ ಅಲೆಯುತ್ತಿದ್ದರು. ಈಚೆಗೆ ಸುವರ್ಣ ತ್ರಿಭುಜ ಬೋಟ್ ಅವಶೇಷಗಳು ಪತ್ತೆಯಾದ ಬಳಿಕ ತೀವ್ರ ಮನನೊಂದು ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಹೆಚ್ಚಿನ ಚಿಕಿತ್ಸೆಗೆ ಸೋಮವಾರ ರಾತ್ರಿ ಚಂದ್ರಶೇಖರ್ ಅವರನ್ನು ಭಟ್ಕಳದಿಂದ ಉಡುಪಿಗೆ ಕರೆ ತರಲಾಗಿತ್ತು. ವಿಷ ದೇಹಕ್ಕೆ ವ್ಯಾಪಿಸಿ ಲಿವರ್ ವೈಫಲ್ಯವಾಗಿತ್ತು. ಕಿಡ್ನಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಶೇಖರ್ ಗುರುವಾರ ಅಸುನೀಗಿದ್ದಾರೆ.

Post Comments (+)